ಸಾರಾಂಶ
ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ಅವರು ‘ಕೊತ್ತಲವಾಡಿ’ ಚಿತ್ರದ ನಂತರ ತಮ್ಮ ಪಿಎ ಪ್ರೊಡಕ್ಷನ್‌ನ ಮೂಲಕ ಎರಡನೇ ಚಿತ್ರ ಘೋಷಣೆ ಮಾಡಿದ್ದಾರೆ.
ಸಿನಿವಾರ್ತೆ
ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ಅವರು ‘ಕೊತ್ತಲವಾಡಿ’ ಚಿತ್ರದ ನಂತರ ತಮ್ಮ ಪಿಎ ಪ್ರೊಡಕ್ಷನ್‌ನ ಮೂಲಕ ಎರಡನೇ ಚಿತ್ರ ಘೋಷಣೆ ಮಾಡಿದ್ದಾರೆ. ತಮ್ಮ ನಿರ್ಮಾಣದ ಈ ಎರಡನೇ ಚಿತ್ರಕ್ಕೂ ಶ್ರೀರಾಜ್ ಅವರೇ ನಿರ್ದೇಶಕರಾಗಿದ್ದಾರೆ. ವಿಜಯ ದಶಮಿ ಹಬ್ಬದ ಪ್ರಯುಕ್ತ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ತಮ್ಮ ಎರಡನೇ ಪ್ರಯತ್ನಕ್ಕೆ ಪುಷ್ಪಾ ಅರುಣ್‌ಕುಮಾರ್ ಚಾಲನೆ ನೀಡಿದ್ದಾರೆ.
ಚಿತ್ರದ ತಾರಾಗಣ ಇನ್ನಷ್ಟೇ ಆಯ್ಕೆ ಆಗಬೇಕಿದೆ. ‘ಕೊತ್ತಲವಾಡಿ’ ಚಿತ್ರಕ್ಕೆ ಕೆಲಸ ಮಾಡಿರುವ ಬಹುತೇಕ ತಂತ್ರಜ್ಞರೇ ಈ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ.