ಯಶ್ ರಾಮಾಯಣಕ್ಕೆ ರಾವಣನ ಎಂಟ್ರಿ!

Follow Us

ಸಾರಾಂಶ

‘ರಾಮಾಯಣ’ ಸಿನಿಮಾದ ರಾವಣನ ಪಾತ್ರದ ಸಿದ್ಧತೆಯಲ್ಲಿ ತೊಡಗಿದ್ದ ಯಶ್‌ ಇದೀಗ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ 

‘ರಾಮಾಯಣ’ ಸಿನಿಮಾದ ರಾವಣನ ಪಾತ್ರದ ಸಿದ್ಧತೆಯಲ್ಲಿ ತೊಡಗಿದ್ದ ಯಶ್‌ ಇದೀಗ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಮುಂಬೈಯಲ್ಲಿ ಯಶ್‌ ಅವರ ರಾವಣನ ಒಡ್ಡೋಲಗಕ್ಕೆಂದೇ ನಿರ್ಮಿಸಲಾಗಿರುವ ಬೃಹತ್‌ ಸೆಟ್‌ನಲ್ಲಿ ಭರದಿಂದ ಶೂಟಿಂಗ್‌ ನಡೆಯುತ್ತಿದೆ.

ಸದ್ಯಕ್ಕೆ ಕೆಲವು ದಿನಗಳ ಕಾಲ ಯಶ್‌ ಅವರ ರಾವಣ ಪಾತ್ರದ್ದಷ್ಟೇ ಶೂಟಿಂಗ್‌ ನಡೆಯಲಿದೆ. ಆ ಬಳಿಕ ಸಾಯಿ ಪಲ್ಲವಿ, ರಣಬೀರ್‌ ಕಪೂರ್‌, ಸನ್ನಿ ಡಿಯೋಲ್‌ ಅವರೂ ಶೂಟಿಂಗ್‌ನಲ್ಲಿ ಸೇರಿಕೊಳ್ಳಲಿದ್ದಾರೆ. ಅವರು ಸೀತೆ, ರಾಮ ಹಾಗೂ ಹನೂಮಂತನ ಪಾತ್ರದಲ್ಲಿ ನಟಿಸಲಿದ್ದಾರೆ. ಇದರಲ್ಲಿ ಸನ್ನಿ ಡಿಯೋಲ್‌ ಜೂನ್‌ ವೇಳೆಗೆ ಶೂಟಿಂಗ್‌ನಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

ಇನ್ನು ಕೆಲವು ದಿನಗಳಲ್ಲಿ ‘ರಾಮಾಯಣ’ ಮೊದಲ ಭಾಗದ ಶೂಟಿಂಗ್‌ ಮುಕ್ತಾಯಗೊಳ್ಳಲಿದೆ. ಆ ಬಳಿಕ ಹೆಚ್ಚು ಗ್ಯಾಪ್‌ ಇಲ್ಲದೇ ಎರಡನೇ ಭಾಗದ ಶೂಟಿಂಗ್‌ ಆರಂಭವಾಗಲಿದೆ. ನಿತೇಶ್‌ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದ ಮೊದಲ ಭಾಗ 2026ರ ದೀಪಾವಳಿ ಹೊತ್ತಿಗೆ ಬಿಡುಗಡೆಯಾಗಲಿದೆ.