ರಾಮಾಯಣ ಪ್ರಚಾರಕ್ಕೆ 375 ಕೋಟಿ ರು. ಖರ್ಚು

Published : Jul 27, 2026, 01:25 PM IST
Yash Ramayana

ಸಾರಾಂಶ

ಸುಮಾರು 4000 ಕೋಟಿ ರು. ವೆಚ್ಚದಲ್ಲಿ ತಯಾರಾಗಿರುವ ಯಶ್‌ ನಟನೆಯ ‘ರಾಮಾಯಣ’ ಸಿನಿಮಾದ ಪ್ರಚಾರವೇ ದೊಡ್ಡ ಸುದ್ದಿಯಾಗುತ್ತಿದೆ. ಈ ಸಿನಿಮಾದ ಅಂತಾರಾಷ್ಟ್ರೀಯ ವಿತರಣೆ ಹಕ್ಕನ್ನು ಪಡೆದುಕೊಂಡಿರುವ ಸೋನಿ ಪಿಕ್ಚರ್ಸ್‌ ಇದರ ಪ್ರಚಾರಕ್ಕೆಂದೇ 235 ಕೋಟಿ. ರು. ತೆಗೆದಿಟ್ಟಿದೆ,

 ಸಿನಿವಾರ್ತೆ

ಸುಮಾರು 4000 ಕೋಟಿ ರು. ವೆಚ್ಚದಲ್ಲಿ ತಯಾರಾಗಿರುವ ಯಶ್‌ ನಟನೆಯ ‘ರಾಮಾಯಣ’ ಸಿನಿಮಾದ ಪ್ರಚಾರವೇ ದೊಡ್ಡ ಸುದ್ದಿಯಾಗುತ್ತಿದೆ. ಈ ಸಿನಿಮಾದ ಅಂತಾರಾಷ್ಟ್ರೀಯ ವಿತರಣೆ ಹಕ್ಕನ್ನು ಪಡೆದುಕೊಂಡಿರುವ ಸೋನಿ ಪಿಕ್ಚರ್ಸ್‌ ಇದರ ಪ್ರಚಾರಕ್ಕೆಂದೇ 235 ಕೋಟಿ. ರು. ತೆಗೆದಿಟ್ಟಿದೆ, ಜೊತೆಗೆ ನಿರ್ಮಾಪಕರು 140 ಕೋಟಿ ರು. ವೆಚ್ಚ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಅಲ್ಲಿಗೆ ಸುಮಾರು 375 ಕೋಟಿ ವೆಚ್ಚದಲ್ಲಿ ಈ ಸಿನಿಮಾದ ಭರ್ಜರಿ ಪ್ರಚಾರ ಕಾರ್ಯ ನಡೆಯಲಿದೆ ಎಂದು ತಿಳಿದುಬಂದಿದೆ.

ಬೃಹತ್‌ ಮೊತ್ತವನ್ನು ವ್ಯಯಿಸುತ್ತಿರುವುದು ಇದೇ ಮೊದಲು

ಭಾರತೀಯ ಸಿನಿಮಾ ಇತಿಹಾಸದಲ್ಲೇ ಪ್ರಚಾರ ಮತ್ತು ಮಾರ್ಕೆಟಿಂಗ್‌ಗೆ ಇಷ್ಟು ಬೃಹತ್‌ ಮೊತ್ತವನ್ನು ವ್ಯಯಿಸುತ್ತಿರುವುದು ಇದೇ ಮೊದಲು. ನಮಿತ್‌ ಮಲ್ಹೋತ್ರಾ ನಿರ್ಮಾಣದ ಈ ಸಿನಿಮಾಕ್ಕೆ ಯಶ್‌ ಸಹ ಬಂಡವಾಳ ಹೂಡಿದ್ದು, ಸಿನಿಮಾವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಲ್ಲಿಸುವ ಗುರಿ ಇಟ್ಟುಕೊಂಡಿದ್ದಾರೆ. ಈ ವರ್ಷ ನವೆಂಬರ್‌ 8ಕ್ಕೆ ಈ ಬಹುನಿರೀಕ್ಷಿತ ಸಿನಿಮಾ ತೆರೆಗೆ ಬರಲಿದೆ.

ಯಶ್‌ ರಾವಣನ ಪಾತ್ರದಲ್ಲಿ ಅಬ್ಬರಿಸಿದರೆ, ರಣಬೀರ್‌ ಕಪೂರ್‌ ರಾಮ ಹಾಗೂ ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ನಟಿಸಿದ್ದಾರೆ. ನಿತೇಶ್‌ ತಿವಾರಿ ಈ ಮಹಾಕಾವ್ಯವನ್ನು ನಿರ್ದೇಶನ ಮಾಡಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಎಲ್ಲಾ ಹೀರೋಗಳು ಯಶ್ ಆಗಲು ಹೋಗಬಾರದು : ಉದಯ್‌ ಕೆ. ಮೆಹ್ತಾ
ಹಣದ ಮೌಲ್ಯ ತಿಳಿಯಿರಿ, ಸ್ಟಾರ್‌ಗಳನ್ನು ಹುಟ್ಟುಹಾಕಿ: ಅನಂತನಾಗ್