ಸಿನಿವಾರ್ತೆ
ಟಗರು ಪುಟ್ಟಿ ಎಂದೇ ಖ್ಯಾತರಾಗಿರುವ ಮಾನ್ವಿತಾ ಕಾಮತ್ ಮತ್ತು ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಕುಮಾರ್ ಅವರ ವಿವಾಹ ಕಳಸದ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಕೊಂಕಣಿ ಸಂಪ್ರದಾಯದಂತೆ ನಡೆದಿದೆ. ಕುಟುಂಬದವರು, ಸ್ನೇಹಿತರು, ಚಿತ್ರರಂಗದ ಗಣ್ಯರು ನವ ದಂಪತಿಗೆ ಶುಭ ಹಾರೈಸಿದ್ದಾರೆ. ಸಿನಿಮಾ ತಾರೆಯರಾದ ನಿಧಿ ಸುಬ್ಬಯ್ಯ, ಶ್ರುತಿ ಹರಿಹರನ್ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕ್ರೀಮ್ ಹಾಗೂ ಕಡುಗೆಂಪು ಕಲರ್ ಕಾಂಬಿನೇಶನ್‌ನ ಸೀರೆ, ಸಾಂಪ್ರದಾಯಿಕ ಮಾದರಿಯ ರತ್ನಾಭರಣಗಳಲ್ಲಿ ಮಾನ್ವಿತಾ ಮಿಂಚಿದರೆ, ಅರುಣ್ ಬಿಳಿ ಬಣ್ಣದ ಕುರ್ತಾ, ಕ್ರೀಮ್ ಬಣ್ಣದ ಧೋತಿ ಧರಿಸಿದ್ದರು. ಅದಕ್ಕೂ ಮೊದಲು ಖಾಸಗಿ ರೆಸಾರ್ಟ್‌ನಲ್ಲಿ ಮೆಹೆಂದಿ, ಹಳದಿ ಶಾಸ್ತ್ರಗಳ ಜೊತೆಗೆ ಕೊಂಕಣಿ ಸಂಪ್ರದಾಯದ ಪೂಲ್‌ಮುದ್ದಿ ಎಂಬ ಆಚರಣೆಯೂ ನಡೆಯಿತು.