ಸಂಜು ವೆಡ್ಸ್ ಗೀತಾ 2 ಚಿತ್ರಕ್ಕೆ ಡಬ್ಬಿಂಗ್ ಆರಂಭ

KannadaprabhaNewsNetwork |  
Published : Apr 11, 2024, 12:55 AM ISTUpdated : Apr 11, 2024, 06:11 AM IST
ಸಂಜು ವೆಡ್ಸ್ ಗೀತಾ 2 | Kannada Prabha

ಸಾರಾಂಶ

ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ನಟನೆಯ ಸಂಜು ವೆಡ್ಸ್ ಗೀತಾ 2 ಚಿತ್ರಕ್ಕೆ ಮೂರು ಹಂತಗಳ ಚಿತ್ರೀಕರಣ ಮುಗಿದಿದ್ದು, ಈಗಷ್ಟೇ ಚಿತ್ರಕ್ಕೆ ಡಬ್ಬಿಂಗ್ ಶುರುವಾಗಿದೆ.

  ಸಿನಿವಾರ್ತೆ

ನಾಗಶೇಖರ್‌ ನಿರ್ದೇಶನದ, ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಜೋಡಿಯಾಗಿ ನಟಿಸುತ್ತಿರುವ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಡಬ್ಬಿಂಗ್‌ ಆರಂಭವಾಗಿದೆ.

ಈ ಕುರಿತು ನಾಗಶೇಖರ್‌, ‘3 ಹಂತದ ಶೂಟಿಂಗ್‌ ಮುಗಿಸಿದ್ದೇವೆ. ನಾಲ್ಕನೇ ಹಂತದ ಚಿತ್ರೀಕರಣ ಶುರು ಮಾಡಲಿದ್ದೇವೆ. ಡಬ್ಬಿಂಗ್ ಕೂಡ ಆರಂಭಿಸಿದ್ದೇವೆ. ಶಿಡ್ಲಘಟ್ಟ ರೇಶ್ಮೆಗೆ ದೊಡ್ಡ ಮಾರ್ಕೆಟ್ ಇದೆ. ರೇಶ್ಮೆ ನೂಲಿಗೆ ಒಳ್ಳೆಯ ಬೆಲೆ ಬೇಕು ಅಂತ ಹೋರಾಡುವ ಇಬ್ಬರು ಪ್ರೇಮಿಗಳ ಕಥೆ ಈ ಚಿತ್ರದಲ್ಲಿದೆ’ ಎನ್ನುತ್ತಾರೆ.

ಶ್ರೀನಗರ ಕಿಟ್ಟಿ ಮಾತನಾಡಿ, ‘ಚಿತ್ರದಲ್ಲಿ ಮಾತುಗಳಿಗೆ ತುಂಬಾ ಪ್ರಾಮುಖ್ಯತೆ ಇರುವುದರಿಂದ ಸ್ವಲ್ಪ ಮುಂಚೆಯೇ ಡಬ್ಬಿಂಗ್‌ ಶುರು ಮಾಡುತ್ತಿದ್ದೇವೆ’ ಎಂದರು. ಈ ಸಂದರ್ಭದಲ್ಲಿ ನಿರ್ಮಾಪಕ ಛಲವಾದಿ ಕುಮಾರ್‌ ಇದ್ದರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

2025ರ ಕನ್ನಡ ಚಿತ್ರರಂಗದ ಸಕ್ಸಸ್‌ ರೇಟ್‌ 0.78%-ಗೆದ್ದ ಕನ್ನಡ ಭಾಷೆಯ ಸಿನಿಮಾಗಳು ಎರಡೇ
ಸೆನ್ಸಾರ್‌ನಲ್ಲಿ ಇಯರ್‌ ಎಂಡ್‌ ರಶ್‌ - ಇಬ್ಬರು ಅಧಿಕಾರಿಗಳ ನಿಯೋಜನೆಗೆ ಮನವಿ