500 ವರ್ಷಗಳ ಹಿಂದಿನ ಐತಿಹಾಸಿಕ ಸಿನಿಮಾಗೆ ಸಿದ್ಧತೆ : ಶ್ರೀಮುರಳಿ

Published : Sep 27, 2025, 01:09 PM IST
Srimurali Sri murali madhagaja

ಸಾರಾಂಶ

‘500 ವರ್ಷಗಳ ಹಿಂದಿನ ಐತಿಹಾಸಿಕ ಸಿನಿಮಾವೊಂದರ ಸಿದ್ಧತೆಯಲ್ಲಿದ್ದೇನೆ. ಇದಕ್ಕಾಗಿ ಕಟ್ಟುನಿಟ್ಟಿನ ವರ್ಕೌಟ್‌, ಡಯೆಟ್‌ ಜೊತೆಗೆ ಪಾತ್ರದ ಮಾನಸಿಕ ತಯಾರಿಯಲ್ಲೂ ತೊಡಗಿಸಿಕೊಂಡಿದ್ದೇನೆ.’

ಸಿನಿವಾರ್ತೆ

‘500 ವರ್ಷಗಳ ಹಿಂದಿನ ಐತಿಹಾಸಿಕ ಸಿನಿಮಾವೊಂದರ ಸಿದ್ಧತೆಯಲ್ಲಿದ್ದೇನೆ. ಇದಕ್ಕಾಗಿ ಕಟ್ಟುನಿಟ್ಟಿನ ವರ್ಕೌಟ್‌, ಡಯೆಟ್‌ ಜೊತೆಗೆ ಪಾತ್ರದ ಮಾನಸಿಕ ತಯಾರಿಯಲ್ಲೂ ತೊಡಗಿಸಿಕೊಂಡಿದ್ದೇನೆ.’

- ಇದು ಶ್ರೀಮುರಳಿ ಮಾತು.

ಪ್ರಶಾಂತ್‌ ನೀಲ್‌ ಚಿತ್ರಗಳಲ್ಲಿ ಸಹ ನಿರ್ದೇಶನ ಮಾಡಿರುವ ಜೊತೆಗೆ ವಿವಿಧ ಚಿತ್ರಗಳಲ್ಲಿ ನಟನೆಯಲ್ಲೂ ತೊಡಗಿಸಿಕೊಂಡಿದ್ದ ಪುನೀತ್ ರುದ್ರನಾಗ್‌ ನಿರ್ದೇಶನದ ಚಿತ್ರದಲ್ಲಿ ಶ್ರೀಮುರಳಿ ಐತಿಹಾಸಿಕ ವೀರನಾಗಿ ಮಿಂಚಲಿದ್ದಾರೆ. ನವೆಂಬರ್‌ನಿಂದ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಜಯರಾಮ್ ದೇವಸಮುದ್ರ ನಿರ್ಮಾಣ ಮಾಡುತ್ತಿದ್ದಾರೆ.

‘ಪಾತ್ರ ಬಹಳ ಪ್ರಾಜೆಕ್ಟ್‌ ಎಕ್ಸೈಟಿಂಗ್‌ ಆಗಿದೆ. ಕತೆ ಸೊಗಸಾಗಿದೆ. ಒಂದು ನಂಬಿಕೆ ಮೇಲೆ ಮುಂದಡಿ ಇಡುತ್ತಿದ್ದೇನೆ’ ಎಂದಿದ್ದಾರೆ ಶ್ರೀ ಮುರಳಿ.

‘ಹೆಸರು ಮಾಡಿರುವ ನಿರ್ದೇಶಕರೆಲ್ಲ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ಪ್ರಾಜೆಕ್ಟ್‌ ಸಿಕ್ಕರೆ ನನಗೆ ಬಹಳ ಸಂತೋಷವೇ. ಹಾಗೆಂದು ಹೊಸಬರ ಸಿನಿಮಾದಲ್ಲಿ ಮಾಡುವಾಗ ಅವರ ಹೊಸ ಥಾಟ್‌, ಹುಮ್ಮಸ್ಸು, ಪ್ರಯೋಗಶೀಲತೆ ಇಷ್ಟವಾಗುತ್ತದೆ. ನಾನು ನಿರ್ದೇಶಕರ ಕಥೆ, ಅದನ್ನು ನರೇಟ್‌ ಮಾಡುವ ಕ್ರಿಯಾಶೀಲತೆಯನ್ನು ಗಮನಿಸುತ್ತೇನೆ’ ಎಂದೂ ಹೇಳಿದ್ದಾರೆ.

PREV
Read more Articles on

Recommended Stories

ಕಾಂತಾರ ಚಾಪ್ಟರ್‌ 1: ಕೇವಲ 34 ನಿಮಿಷದಲ್ಲಿ 10,000 ಟಿಕೆಟ್‌ ಮಾರಾಟ
ಪೌರ ಕಾರ್ಮಿಕರ ಕತೆ ಹೇಳುವ ಗಾರ್ಡನ್