100 ಕೋಟಿ ಕ್ಲಬ್‌ ಸೇರುವ ಕಡೆಗೆ ಸು ಫ್ರಂ ಸೋ

Published : Aug 09, 2025, 12:52 PM IST
Su from Shetty

ಸಾರಾಂಶ

ರಾಜ್‌ ಬಿ ಶೆಟ್ಟಿ ನಿರ್ಮಾಣ, ಜೆ ಪಿ ತುಮಿನಾಡು ನಿರ್ದೇಶನದ ‘ಸು ಫ್ರಮ್‌ ಸೋ’ ಸಿನಿಮಾ ತೆಲುಗಿನಲ್ಲಿ ಬಿಡುಗಡೆ ಕಂಡಿದ್ದು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

  ಸಿನಿವಾರ್ತೆ

ರಾಜ್‌ ಬಿ ಶೆಟ್ಟಿ ನಿರ್ಮಾಣ, ಜೆ ಪಿ ತುಮಿನಾಡು ನಿರ್ದೇಶನದ ‘ಸು ಫ್ರಮ್‌ ಸೋ’ ಸಿನಿಮಾ ತೆಲುಗಿನಲ್ಲಿ ಬಿಡುಗಡೆ ಕಂಡಿದ್ದು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಸದ್ಯ ಸ್ಟಾರ್‌ ಸಿನಿಮಾಗಳ ಅಬ್ಬರದ ನಡುವೆಯೂ ಹೈದರಾಬಾದ್‌ನಲ್ಲಿ 74ಕ್ಕೂ ಅಧಿಕ ಶೋಗಳನ್ನು ಪಡೆದುಕೊಂಡಿದೆ. ವೀಕೆಂಡ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಬರುವ ನಿರೀಕ್ಷೆ ಇದೆ.

ಇನ್ನೊಂದೆಡೆ ಮಲಯಾಳಂನಲ್ಲಿ ಸಿನಿಮಾಗೆ ಜನ ಬೆಂಬಲ ಸಿಕ್ಕಿದೆ. 174ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅನೇಕ ಕಡೆ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ವೀಕೆಂಡ್‌ನಲ್ಲಿ ಶೋಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಈ ಸಿನಿಮಾ ಈಗಾಗಲೇ ಸುಮಾರು 57 ಕೋಟಿ ರು.ಗೂ ಅಧಿಕ ಗಳಿಕೆ ದಾಖಲಿಸಿದ್ದು, 100 ಕೋಟಿ ಕ್ಲಬ್‌ನತ್ತ ಮುನ್ನುಗ್ಗುತ್ತಿದೆ. ಹಬ್ಬದ ರಜೆ, ವೀಕೆಂಡ್‌ ಜೊತೆಯಾಗಿ ಬಂದಿರುವುದು ಕಲೆಕ್ಷನ್‌ ಹೆಚ್ಚಿಸುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಮೂರನೇ ವಾರವೂ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಬಾರಿಯೂ ವೀಕೆಂಡ್‌ನಲ್ಲಿ ಹಲವು ಶೋಗಳು ಹೌಸ್‌ಫುಲ್‌ ಆಗಿವೆ.

ಸೆಪ್ಟೆಂಬರ್‌ ತಿಂಗಳಿನಲ್ಲಿ ಈ ಸಿನಿಮಾ ಓಟಿಟಿಗೆ ಬರುವ ಸಾಧ್ಯತೆ ಇದೆ. ಅಮೆಜಾನ್‌ ಪ್ರೈಮ್‌ ಈ ಚಿತ್ರದ ಓಟಿಟಿ ಹಕ್ಕು ಖರೀದಿಸಿದೆ.

PREV
Read more Articles on

Recommended Stories

ಆ. 15ಕ್ಕೆ ದಿ ಡೆವಿಲ್ ಚಿತ್ರದ ಹಾಡು ಬಿಡುಗಡೆ : ದರ್ಶನ್‌ ಬೈಗುಳವನ್ನೇ ಹಾಡಿನ ಸಾಲಾಗಿಸಿದ ನಿರ್ದೇಶಕ
ಅಮಿತಾಬ್ ಸಿನಿಮಾದಿಂದ ಹೊರನಡೆದ ದೀಪಿಕಾ ಪಡುಕೋಣೆ ನಟನೆ ಬದಲು ನಿರ್ಮಾಣಕ್ಕಿಳಿದ ಸ್ಟಾರ್ ನಟಿ