ಬಿಲ್ಲ ರಂಗ ಬಾಷ ಶೂಟಿಂಗ್‌ಗೆ ಬಾಡಿ ಬಿಲ್ಡ್ ಮಾಡಿ ಕಿಚ್ಚ ಸುದೀಪ್‌ ರೆಡಿ

KannadaprabhaNewsNetwork |  
Published : Apr 04, 2025, 12:47 AM ISTUpdated : Apr 04, 2025, 04:36 AM IST
ಬಿಲ್ಲರಂಗಭಾಷ | Kannada Prabha

ಸಾರಾಂಶ

ಬಿಲ್ಲ ರಂಗ ಬಾಷ ಸಿನಿಮಾಕ್ಕಾಗಿ ಬಾಡಿ ಬಿಲ್ಡ್ ಮಾಡಿದ್ದಾರೆ ಸುದೀಪ್

ಅನೂಪ್‌ ಭಂಡಾರಿ ನಿರ್ದೇಶನದ, ಕಿಚ್ಚ ಸುದೀಪ್‌ ನಟನೆಯ ‘ಬಿಲ್ಲ ರಂಗ ಬಾಷ’ ಸಿನಿಮಾ ಶೀಘ್ರ ಸೆಟ್ಟೇರುವ ಸೂಚನೆ ಸಿಕ್ಕಿದೆ. ಈ ಸಿನಿಮಾದ ಪಾತ್ರಕ್ಕಾಗಿ ಕಳೆದ ಕೆಲವು ತಿಂಗಳಿಂದ ವರ್ಕೌಟ್‌ ಮಾಡುತ್ತಿರುವ ಸುದೀಪ್‌ ಇದೀಗ ಬಾಡಿ ಬಿಲ್ಡ್‌ ಮಾಡಿರುವ ಫೋಟೋವನ್ನು ಸೋಷಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

 ‘ಏ.16’ ಎಂಬ ದಿನಾಂಕವನ್ನೂ ಪ್ರಕಟಿಸಿದ್ದಾರೆ. ಆ ದಿನ ‘ಬಿಲ್ಲ ರಂಗ ಬಾಷ’ ಸೆಟ್ಟೇರಲಿದೆ ಎಂಬುದು ಸದ್ಯದ ನಂಬಿಕೆ. ಈ ಸಿನಿಮಾವನ್ನು ಚೈತನ್ಯ ರೆಡ್ಡಿ ಹಾಗೂ ನಿರಂಜನ ರೆಡ್ಡಿ ನಿರ್ಮಿಸುತ್ತಿದ್ದಾರೆ. ಇದು ಕ್ರಿ.ಶ 2209ರ ಕಾಲಘಟ್ಟದಲ್ಲಿ ನಡೆಯುವ ಕಥೆ. ವೈಜ್ಞಾನಿಕತೆ ಬೆರೆಸಿದ ಫ್ಯಾಂಟಸಿ ಕಥೆಯನ್ನು ಅನೂಪ್‌ ಭಂಡಾರಿ ಈ ಸಿನಿಮಾದಲ್ಲಿ ನಿರೂಪಿಸಲಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮಲಯಾಳಂನ ಸಿನಿಮಾ ನಿರ್ದೇಶಿಸುತ್ತಾರಾ ರಿಷಬ್‌? ಬಿಗ್‌ ಬಜೆಟ್‌ ಪ್ರಾಜೆಕ್ಟ್‌ಗೆ ಮರುಜೀವ
ಪಾಕ್‌ನ ಚಿತ್ರಮಂದಿರದಲ್ಲಿ ಬ್ಯಾನ್‌ ಆಗಿದ್ದ ಧುರಂಧರ್‌, ನೆಟ್‌ಫ್ಲಿಕ್ಸ್‌ ಒಟಿಟೀಲಿ ನಂ.1