ಕನ್ನಡಪ್ರಭ ವಾರ್ತೆ ಬೆಂಗಳೂರು
ಹೀಗಾಗಿ ಹೊಸಕೋಟೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ದಾಸ್ತಾನು ಮಳಿಗೆಗೆ ಬೀಗ ಜಡಿದಿದ್ದು, ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗಳಲ್ಲಿ ತಪ್ಪು ಲೇಬಲಿಂಗ್, ಅವಧಿ ಮೀರಿದ ಆಹಾರ ಪದಾರ್ಥ, ಪರವಾನಗಿ ಇಲ್ಲದೆ ಮಾರಾಟ ಮಾಡುತ್ತಿದ್ದ ಔಷಧ ಸೇರಿ 1.42 ಕೋಟಿ ರು. ಮೌಲ್ಯದ ವಸ್ತುಗಳ ಜಪ್ತಿ ಮಾಡಲಾಗಿದೆ.
ಕಳೆದೊಂದು ತಿಂಗಳಲ್ಲಿ 3 ಕೋಟಿ ರು.ಗಳಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಇನ್ನೂ ಕೋಟ್ಯಂತರ ರು. ಮೌಲ್ಯದಷ್ಟು ವಸ್ತುಗಳ ಮೂಲ ಗುಣಮಟ್ಟದ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯು.ಟಿ.ಖಾದರ್, ಆಹಾರ, ಔಷಧ ಕ್ಷೇತ್ರದ ಅಕ್ರಮ ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ದೇವನಹಳ್ಳಿಯ ಡಿಫೆನ್ಸ್ ಪಾರ್ಕ್ ಬಳಿಯ ಅಮೆಜಾನ್ ಸೆಂಟರ್‌ನಲ್ಲೂ ಉಲ್ಲಂಘನೆ ಕಂಡು ಬಂದಿದೆ. ಅನುಗುಣವಾಗಿರದ ತಪ್ಪು ಹಾಗೂ ಅಸಮರ್ಪಕ ಲೇಬಲಿಂಗ್ ಹೊಂದಿರುವ 20 ಲಕ್ಷ ರು. ಮೌಲ್ಯದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಸಮರ್ಪಕ ಲೇಬಲಿಂಗ್ ಸಂಬಂಧ 14 ಲಕ್ಷ ರು. ಮೌಲ್ಯದ ಹಾಗೂ ಅವಧಿ ಮೀರಿದ 6 ಲಕ್ಷ ರು. ಮೌಲ್ಯದ ಆಹಾರ ಉತ್ಪನ್ನ ಇದರಲ್ಲಿದೆ. ಜತೆಗೆ, ಪರವಾನಗಿ ಇಲ್ಲದೆ ಸಂಗ್ರಹಿಸಿದ್ದ 2.45 ಲಕ್ಷ ರು. ಮೌಲ್ಯದ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆನೇಕಲ್‌ನ ತಟ್ಟಿಹಳ್ಳಿ, ಮಡಿವಾಳ ಬಳಿಯ ಅಮೆಜಾನ್ ಸೆಂಟರ್‌ನಿಂದ ಒಟ್ಟು 32 ಲಕ್ಷ ರು. ಮೌಲ್ಯದ ಪದಾರ್ಥ ಸೀಜ್ ಮಾಡಲಾಗಿದೆ ಎಂದು ಹೇಳಿದರು.-ಬಾಕ್ಸ್-
ಈಚೆಗೆ ಕೋರಮಂಗಲದಲ್ಲಿ ಪೆಪ್‌ಟೈಡ್ ಪಾರ್ಟಿ ಆಯೋಜನೆಗೊಂಡು ರದ್ದಾಗಿತ್ತು. ಈ ಬಗ್ಗೆ ತನಿಖೆ ವೇಳೆ ಆನ್‌ಲೈನ್‌ನಲ್ಲಿ ಔಷಧ ಮಾರಾಟ ವಿಚಾರ ಬೆಳಕಿಗೆ ಬಂದಿದೆ. ಇದರ ಬೆನ್ನತ್ತಿ ಹೋದಾಗ ಮೆಸರ್ಸ್ ಅಮೆಜಾನ್, ಇನ್‌ಸ್ಟಾಮಾರ್ಟ್, ಸಪ್ನಾ ಬಜಾರ್ ಹಾಗೂ ಲಿಯೋ 7 ಎಂಟರ್‌ಪ್ರೈಸಸ್ ಮತ್ತಿತರ ಕಡೆ ಪರವಾನಗಿ ಇಲ್ಲದೆ ಇ-ಕಾಮರ್ಸ್, ಡಾರ್ಕ್ ಸ್ಟೋರ್‌ಗಳಲ್ಲಿ ಔಷಧ ಪತ್ತೆಯಾಗಿವೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.
ಆಹಾರ ಇಲಾಖೆಯಿಂದ ದಾಳಿ: ಖಾದರ್
ಆರೋಗ್ಯಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದೊಂದು ತಿಂಗಳಿಂದ ಸತತವಾಗಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ನಿರಂತರವಾಗಿ ದಾಳಿ ನಡೆಸಿ ಕಳಪೆ, ಪರವಾನಗಿ ಇಲ್ಲದ ಔಷಧ ಪ್ರಕರಣಗಳಂತಹ ಅಕ್ರಮ ಬಯಲು ಮಾಡುತ್ತಿದೆ. ಆದರೆ, ಇಂತಹ ಪ್ರಕರಣಗಳನ್ನು ಬೇರುಸಹಿತ ಕಿತ್ತುಹಾಕಲು ಪ್ರತ್ಯೇಕ ಕಾನೂನು, ಕ್ರಿಮಿನಲ್ ಕಾಯಿದೆಯಡಿ ತಂದು ಕ್ರಮ ವಹಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.