ಸಿನಿವಾರ್ತೆ
ತಮಿಳು ನಟ ವಿಶಾಲ್ 48ನೇ ಹರೆಯದಲ್ಲಿ ಬಹುಕಾಲದ ಗೆಳತಿ, ಸಿನಿಮಾ ನಟಿ ಸಾಯಿ ಧನ್ಸಿಕಾ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಚೆನ್ನೈಯಲ್ಲಿ ವಿಶಾಲ್ ಅವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾರೆಯರಿಬ್ಬರೂ ಉಂಗುರ ಬದಲಿಸಿಕೊಂಡು ಸಂಬಂಧವನ್ನು ದೃಢೀಕರಿಸಿದರು.
ಈ ಹಿಂದೆ ಆ.29ರಂದು ವಿವಾಹವಾಗುತ್ತಿರುವುದಾಗಿ ವಿಶಾಲ್ ಹೇಳಿದ್ದರು. ಆದರೆ ಇದೀಗ ಮದುವೆಯ ಬದಲಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಮದುವೆಯ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.