ಯಶ್ ಟಾಕ್ಸಿಕ್‌ ತಬಾಹಿ ವೀಡಿಯೋ ಹಾಡು ಬಂತು

Published : Jul 09, 2026, 01:13 PM IST
rocking star yash toxic movie tabaahi song

ಸಾರಾಂಶ

ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದ ‘ತಬಾಹಿ’ ವೀಡಿಯೋ ಹಾಡು ಬಿಡುಗಡೆ ಆಗಿದೆ. ರಿಲೀಸ್‌ ಆದ ಕೆಲವೇ ಕ್ಷಣಗಳಲ್ಲಿ ಈ ಹಾಡು ವೈರಲ್ ಆಗಿದೆ. ಕಾರಣ ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ಯಶ್‌ ಹಾಗೂ ಕಿಯಾರಾ ನಡುವಿನ ಬೋಲ್ಡ್‌ ದೃಶ್ಯಗಳು.

  ಸಿನಿವಾರ್ತೆ

ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದ ‘ತಬಾಹಿ’ ವೀಡಿಯೋ ಹಾಡು ಬಿಡುಗಡೆ ಆಗಿದೆ. ರಿಲೀಸ್‌ ಆದ ಕೆಲವೇ ಕ್ಷಣಗಳಲ್ಲಿ ಈ ಹಾಡು ವೈರಲ್ ಆಗಿದೆ. ಕಾರಣ ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ಯಶ್‌ ಹಾಗೂ ಕಿಯಾರಾ ನಡುವಿನ ಬೋಲ್ಡ್‌ ದೃಶ್ಯಗಳು.

ಹಾಡಿನುದ್ದಕ್ಕೂ ಬೀಚು, ಕಾರು, ಪಬ್ಬು

ಹಾಡಿನುದ್ದಕ್ಕೂ ಬೀಚು, ಕಾರು, ಪಬ್ಬು, ಸರ್ಕಸ್‌ ಹೀಗೆ ಎಲ್ಲೆಲ್ಲೂ ರಾಯ ಮತ್ತು ನಾಡಿಯಾ ಜೋಡಿಯ ರೊಮ್ಯಾಂಟಿಕ್‌ ಸೀನ್‌ಗಳೇ ಇವೆ. ಸಿನಿಮಾದಲ್ಲಿ ಈ ಜೋಡಿಯ ಅಪೀಯರೆನ್ಸ್‌, ಕೆಮೆಸ್ಟ್ರಿ ಹೇಗಿರಬಹುದು ಎಂಬುದು ಈ ಹಾಡಿನಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

ಪೋರ್ಚುಗೀಸರ ಕಾಲದ ಗೋವನ್‌ ಪರಿಸರ

ಪೋರ್ಚುಗೀಸರ ಕಾಲದ ಗೋವನ್‌ ಪರಿಸರದಲ್ಲಿ ತೆರೆದುಕೊಳ್ಳುವ ಈ ಹಾಡಿನಲ್ಲಿ ಯಶ್‌ ದೇಹದಾರ್ಢ್ಯ ಹಾಗೂ ಕಿಯಾರಾ ಗ್ಲಾಮರ್‌ ಹೈಲೈಟ್‌ ಆಗಿದೆ. ವಿಶೇಷ ಅಂದರೆ ಹಾಡಿನ ಮಧ್ಯೆ ನಯನತಾರಾ ಕಾಣಿಸಿಕೊಂಡಿದ್ದಾರೆ. ಇನ್ನೊಂದೆಡೆ ಈ ಹಾಡಿನಲ್ಲಿ ಬಾಲಿವುಡ್‌ ನಟಿ ತಾರ ಸುತಾರಿಯಾ ಮತ್ತು ಯಶ್‌ ನಡುವೆ ಡೈಲಾಗ್‌ ಸಹ ಮೂಡಿಬಂದಿದ್ದು, ಇದಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆ.26ರಂದು ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಸಿದ್ಧಗಂಗಾ ಮಠದ ಮಕ್ಕಳ ಜೊತೆ ಡಾಲಿ ಧನಂಜಯ
ಗ್ರಾಮಾಯಣ : ಊರು- ಕೇರಿಯಲ್ಲಿ ದೇವನೂರು ಸಂಚಾರ