ಸ್ಯಾಂಡಲ್‌ವುಡ್‌ನಲ್ಲಿ ಚಿತ್ರಗಳ ಸುಗ್ಗಿ : ಒಂದೇ ದಿನ ನಾಲ್ಕು ಸಿನಿಮಾಗಳು ರಿಲೀಸ್‌

KannadaprabhaNewsNetwork |  
Published : Oct 18, 2024, 12:20 AM ISTUpdated : Oct 18, 2024, 07:11 AM IST
ನಾಲ್ಕು ಚಿತ್ರಗಳು ತೆರೆಗೆ | Kannada Prabha

ಸಾರಾಂಶ

ಈ ಶುಕ್ರವಾರ ನಾಲ್ಕು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಬೇರೆ ಬೇರೆ ಕತೆಗಳನ್ನು ಒಳಗೊಂಡ ಚಿತ್ರಗಳು ಇವು.

1. ಮರ್ಫಿ

ಥ್ರಿಲ್ಲರ್‌, ಸಸ್ಪೆನ್ಸ್‌ ನೆರಳಿನಲ್ಲಿ ಎರಡು ಕಾಲಘಟ್ಟಗಳ ಕತೆಯನ್ನು ಹೇಳುವ ಸಿನಿಮಾವಿದು. ಡೇವಿಡ್‌ ಹಾಗೂ ನಂದಾ ಜೀವನದ ಕತೆಯನ್ನು ಈ ಚಿತ್ರದಲ್ಲಿ ನೋಡಬಹುದು. ಪ್ರಭು ಮುಂಡ್ಕೂರು, ರೋಶಿನಿ ಪ್ರಕಾಶ್, ದತ್ತಣ್ಣ, ಇಳಾ ವೀರಮಲ್ಲ ಮುಂತಾದವರು ನಟಿಸಿದ್ದಾರೆ. ಬಿ ಎಸ್‌ ಪ್ರದೀಪ್‌ ವರ್ಮಾ ನಿರ್ದೇಶನ, ರಾಮ್ಕೋ ಸೋಮಣ್ಣ ನಿರ್ಮಾಣವಿದೆ.

2. ಪ್ರಕರಣ ತನಿಖೆ ಹಂತದಲ್ಲಿದೆ

ಹೆಸರೇ ಹೇಳುವಂತೆ ಇದೊಂದು ಕ್ರೈಮ್‌ ಥ್ರಿಲ್ಲರ್‌ ಸಿನಿಮಾ. 95 ನಿಮಿಷಗಳ ಥ್ರಿಲ್ಲರ್‌ ಚಿತ್ರವನ್ನು ಸುಂದರ್‌ ಎಸ್‌ ನಿರ್ದೇಶಿಸಿದ್ದಾರೆ. ರಂಗಭೂಮಿಯಲ್ಲಿ ಹತ್ತಾರು ವರ್ಷಗಳಿಂದ ಪಳಗಿಕೊಂಡಿದ್ದವರೆಲ್ಲ ಸೇರಿ ಈ ಚಿತ್ರವನ್ನು ರೂಪಿಸಿದ್ದಾರೆ. ಚಿಂತನ್ ಕಂಬಣ್ಣ ಚಿತ್ರದ ನಿರ್ಮಾಪಕರು. ಮಹೀನ್‌ ಕುಬೇರ್‌, ಚಿಂತನ್ ಕಂಬಣ್ಣ, ಮುತ್ತುರಾಜ್‌ ಟಿ, ರಾಜ್‌ ಗಗನ್ ಚಿತ್ರದಲ್ಲಿ ನಟಿಸಿದ್ದಾರೆ.

3. ಸಿಂಹರೂಪಿಣಿ

‘ಕೆಜಿಎಫ್‌’ ಚಿತ್ರದ ಹಾಡುಗಳ ಮೂಲಕ ಜನಪ್ರಿಯರಾದ ಕಿನ್ನಾಳ್‌ ರಾಜ್‌ ನಿರ್ದೇಶನದ ಚಿತ್ರವಿದು. ನಂಜುಂಡೇಶ್ವರ ನಿರ್ಮಾಪಕರು. ಯಶ್‌ ಶೆಟ್ಟಿ, ಅಂಕಿತಾಗೌಡ, ದಿವ್ಯಾ ಆಲೂರು, ಹಿರಿಯ ನಟ ಸುಮನ್, ತಮಿಳಿನ ದೀನಾ, ದಿನೇಶ್‌ ಮಂಗಳೂರು, ಹರೀಶ್‌ ರಾಯ್, ನೀನಾಸಂ ಅಶ್ವಥ್, ತಬಲನಾಣಿ, ವಿಜಯ್‌ ಚೆಂಡೂರು ನಟಿಸಿದ್ದಾರೆ. ಇದು ದೇವಿಯ ಸುತ್ತ ಸಾಗುವ ಭಕ್ತಿ ಪ್ರಧಾನ ಚಿತ್ರವಾಗಿದೆ.

4. ಮಾಂತ್ರಿಕ

ಆತ್ಮ, ದೆವ್ವಗಳು ಇವೆಯೇ ಎಂದು ಹುಡುಕಾಟ ಮಾಡುವ ಸಿನಿಮಾ. ಗೋಸ್ಟ್‌ ಹಂಟಿಂಗ್‌, ತಾರ್ಕಿಕ ಚಿಂತನೆಗಳ ಆಯಾಮದಲ್ಲಿ ಮೂಡಿ ಬಂದಿರುವ ಚಿತ್ರ. ವ್ಯಾನವರ್ಣ ಜಮ್ಮುಲ ನಿರ್ದೇಶನ, ನಟನೆ ಇದೆ. ರಾಧಿಕಾ ಮಾಲಿ ಪಾಟೀಲ, ಮೈಥಿಲಿ ನಾಯಕ್ ನಾಯಕಿಯರು. ಆಯನ ಚಿತ್ರದ ನಿರ್ಮಾಪಕಿ. ಸ್ಟಾಲಿನ್‌ ಸಂಗೀತ, ಅನಿಲ್ ಆಂಟೋನಿ ಹಾಗೂ ರಮೇಶ್ ಮರ‍್ರಿಪಲ್ಲಿ ಕ್ಯಾಮೆರಾ ಚಿತ್ರಕ್ಕಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ದಿ ಡೆವಿಲ್‌ ಕಾಸ್ಟ್ಯೂಮ್‌ನಲ್ಲಿ ದರ್ಶನ್‌ ಪುತ್ರ ವಿನೀಶ್‌
ಪಾಕಿಸ್ತಾನದಲ್ಲಿ ನಿಷೇಧವಿದ್ದರೂ ಧುರಂಧರ್‌ ಸೂಪರ್‌ಹಿಟ್‌