ಟಾಕ್ಸಿಕ್‌ ಚಿತ್ರದ ಮೊದಲ ದಿನದ ಶೋಗಳ ಟಿಕೆಟ್‌ ಬಹುತೇಕ ಸೋಲ್ಡ್‌ ಔಟ್‌

Published : Aug 22, 2026, 12:02 PM IST
Toxic advance booking data

ಸಾರಾಂಶ

ಆ.26ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿರುವ ಯಶ್‌ ನಟನೆಯ ‘ಟಾಕ್ಸಿಕ್‌’ ಚಿತ್ರದ ಟಿಕೆಟ್‌ಗಳ ಮುಂಗಡ ಬುಕಿಂಗ್‌ ಓಪನ್‌ ಆಗುತ್ತಿದ್ದಂತೆಯೇ ರಾಜ್ಯದ ಬಹುತೇಕ ಚಿತ್ರಮಂದಿರಗಳ ಮೊದಲ ದಿನದ ಬಹುತೇಕ ಎಲ್ಲಾ ಶೋಗಳ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ.

ಸಿನಿವಾರ್ತೆ

ಆ.26ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿರುವ ಯಶ್‌ ನಟನೆಯ ‘ಟಾಕ್ಸಿಕ್‌’ ಚಿತ್ರದ ಟಿಕೆಟ್‌ಗಳ ಮುಂಗಡ ಬುಕಿಂಗ್‌ ಓಪನ್‌ ಆಗುತ್ತಿದ್ದಂತೆಯೇ ರಾಜ್ಯದ ಬಹುತೇಕ ಚಿತ್ರಮಂದಿರಗಳ ಮೊದಲ ದಿನದ ಬಹುತೇಕ ಎಲ್ಲಾ ಶೋಗಳ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ.

ಪ್ರತಿ ಗಂಟೆಗೆ 25 ಸಾವಿರ ಟಿಕೆಟ್‌ ಸೇಲ್‌

ಮಲ್ಟಿಪ್ಲೆಕ್ಸ್​​ಗಳ ಮೊದಲ ದಿನದ ಬಹುತೇಕ ಪ್ರದರ್ಶನಗಳ ಎಲ್ಲಾ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಮಾರಾಟ ಆಗಿದ್ದು, ಬುಕ್‌ಮೈಶೋ ಆ್ಯಪ್‌ನಲ್ಲೇ ಪ್ರತಿ ಗಂಟೆಗೆ 25 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಸೇಲ್‌ ಆಗುವ ಮೂಲಕ ‘ಟಾಕ್ಸಿಕ್‌’ ಸಿನಿಮಾ ಮುಂಗಡ ಬುಕ್ಕಿಂಗ್‌ನಲ್ಲಿ ದಾಖಲೆ ನಿರ್ಮಿಸಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಈ ಪರಿ ಟಿಕೆಟ್‌ ಬುಕಿಂಗ್‌ ಆಗುತ್ತಿರುವುದು ಕನ್ನಡ ಚಿತ್ರವೊಂದರ ಮಟ್ಟಿಗೆ ಸಾರ್ವಕಾಲಿಕ ದಾಖಲೆ ಎನ್ನುತ್ತಿದೆ ಚಿತ್ರರಂಗ.

ಬೆಂಗಳೂರಿನಲ್ಲಿ ಟಿಕೆಟ್‌ ಬೆಲೆ 250 ರು. ನಿಂದ 2000 ಸಾವಿರ

ಸಿನಿಮಾ ಬಿಡುಗಡೆಗೆ ನಾಲ್ಕು ದಿನಗಳು ಇರುವಾಗಲೇ ಹೀಗೆ ಬಾಕ್ಸ್‌ ಅಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಯಶ್‌ ಅವರ ‘ಟಾಕ್ಸಿಕ್‌’ ಚಿತ್ರದ ಟಿಕೆಟ್‌ಗಳ ಬೆಲೆ ಗಗನಕ್ಕೇರಿದೆ. ಬೆಂಗಳೂರಿನಲ್ಲಿ ಸಿಂಗಲ್‌ ಸ್ಕ್ರೀನ್‌ಗಳಲ್ಲಿ 250- 300 ರು., ಮಲ್ಟಿಪ್ಲೆಕ್ಸ್‌ಗಳಲ್ಲಿ ಸಾಮಾನ್ಯ ವರ್ಗದಲ್ಲಿ 350 ರಿಂದ 500 ರು, ಪ್ರೀಮಿಯಂ ಸೀಟ್‌ ಹಾಗೂ ವಿಶೇಷ ಶೋಗಳಿಗೆ 600 ರಿಂದ 800 ರು., ಪ್ರೀಮಿಯಂ ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ಗಳು 900 ರಿಂದ 1,500 ರು. ಅತಿ ಪ್ರೀಮಿಯಂ ಸ್ಕ್ರೀನ್‌ಗಳಲ್ಲಿ 1,900 ರಿಂದ 2000 ಸಾವಿರ ವರೆಗೂ ಟಿಕೆಟ್‌ ಸೇಲ್ ಆಗುತ್ತಿವೆ.

ರಾಜ್ಯದ ಬೇರೆ ಭಾಗಗಳಲ್ಲಿ 200 ರಿಂದ 700 ರು.

ರಾಜ್ಯದ ಬೇರೆ ಬೇರೆ ಭಾಗಗಳಲ್ಲೂ ಬೇರೆ ಟಿಕೆಟ್‌ ದರಗಳನ್ನು ನಿಗದಿ ಮಾಡಲಾಗಿದೆ. ಮೈಸೂರಿನಲ್ಲಿ ಸಾಮಾನ್ಯ ಟಿಕೆಟ್‌ 200-400 ರು., ಪ್ರೀಮಿಯಂ 400-700 ರು., ಮಂಗಳೂರು 200-350 ರು., ಪ್ರೀಮಿಯಂ 350-600 ರು., ಹುಬ್ಬಳ್ಳಿ ಮತ್ತು ಧಾರವಾಡ 150-300 ರು., ಪ್ರೀಮಿಯಂ 300-500 ರು, ತುಮಕೂರು 150-300 ರು., 300-500 ರು., ಶಿವಮೊಗ್ಗ 150-300 ರು., ಪ್ರೀಮಿಯಂ 300- 500 ರು., ದಾವಣಗೆರೆ 150-300 ರು., 300-500 ರು., ಉಡುಪಿ 180-350 ರು., 350-600 ರು, ಕುಂದಾಪುರ 150-300 ರು., 300- 500 ರು., ರಾಯಚೂರು 150-300 ರು, 300-500 ರು., ಕಲಬುರಗಿ 150-300 ರು., 300-500 ರು. ವರೆಗೂ ಟಿಕೆಟ್‌ ಬೆಲೆ ನಿಗದಿಯಾಗಿದೆ.

ದೇಶದ ಬೇರೆ ಬೇರೆ ನಗರಗಳ ಪೈಕಿ ಮುಂಬೈ ಹಾಗೂ ದೆಹಲಿಯಲ್ಲಿ 800 ರಿಂದ 900 ರು. ಗೆ ‘ಟಾಕ್ಸಿಕ್‌’ ಚಿತ್ರದ ಟಿಕೆಟ್‌ಗಳು ಮಾರಾಟ ಆಗುತ್ತಿವೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ ಸಾಹುಕಾರ್‌ ಜಾನಕಿ ನೆನಪು
ವರ್ಷಕ್ಕೆ 6 ತಿಂಗಳು ಕೆಲಸವಿಲ್ಲ, ಆ್ಯಂಕರಿಂಗ್‌ ಖುಷಿ ಕೊಡಲಿಲ್ಲ: ಅನುಪಮಾ ಗೌಡ