ಟಾಕ್ಸಿಕ್ ಯಶ್ ಚಿತ್ರ ಅಲ್ಲ, ಭಾರತೀಯ ಸಿನಿಮಾ : ಯಶ್

Published : Aug 10, 2026, 01:14 PM IST
Yash

ಸಾರಾಂಶ

‘ಇನ್ನುಮುಂದೆ ಕನ್ನಡ, ಹಿಂದಿ, ತೆಲುಗು ಸಿನಿಮಾ ಎಂಬ ಪ್ರತ್ಯೇಕತೆ ಇರಲ್ಲ. ಟಾಕ್ಸಿಕ್‌ ಯಶ್ ಚಿತ್ರ ಅಲ್ಲ, ಅದು ಭಾರತೀಯ ಸಿನಿಮಾ. ಇಂಡಿಯನ್‌ ಸಿನಿಮಾಕ್ಕೆ ಟಾಕ್ಸಿಕ್ ಒಂದು ಲೇಬಲ್. ನಾವೆಲ್ಲ ಭಾರತೀಯ ಸಿನಿಮಾ ಮೂಲಕ ಗುರುತಿಸಿಕೊಂಡು ವಿಶ್ವಮಟ್ಟಕ್ಕೆ ನಮ್ಮ ಸಿನಿಮಾಗಳನ್ನು ತಲುಪಿಸಬೇಕು

 ಸಿನಿವಾರ್ತೆ

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಟ್ರೇಲರ್ ಪಂಚಭಾಷೆಗಳಲ್ಲಿ ಬಿಡುಗಡೆಯಾಗಿ ಅತ್ಯುತ್ತಮ ಸ್ಪಂದನೆ ಪಡೆಯುತ್ತಿದೆ.

ಟ್ರೇಲರ್‌ ಲಾಂಚ್‌ ವೇಳೆ ಯಶ್‌, ‘ಇನ್ನುಮುಂದೆ ಕನ್ನಡ, ಹಿಂದಿ, ತೆಲುಗು ಸಿನಿಮಾ ಎಂಬ ಪ್ರತ್ಯೇಕತೆ ಇರಲ್ಲ. ಟಾಕ್ಸಿಕ್‌ ಯಶ್ ಚಿತ್ರ ಅಲ್ಲ, ಅದು ಭಾರತೀಯ ಸಿನಿಮಾ. ಇಂಡಿಯನ್‌ ಸಿನಿಮಾಕ್ಕೆ ಟಾಕ್ಸಿಕ್ ಒಂದು ಲೇಬಲ್. ನಾವೆಲ್ಲ ಭಾರತೀಯ ಸಿನಿಮಾ ಮೂಲಕ ಗುರುತಿಸಿಕೊಂಡು ವಿಶ್ವಮಟ್ಟಕ್ಕೆ ನಮ್ಮ ಸಿನಿಮಾಗಳನ್ನು ತಲುಪಿಸಬೇಕು. ದಾರಿ ಯಾವುದೇ ಇರಬಹುದು, ಗುರಿ ಮುಟ್ಟಬೇಕು. ಕಾಲಕ್ಕೆ ತಕ್ಕ ಹಾಗೆ ಕುಣಿಯಬೇಕು. ತಾಳಕ್ಕೆ ತಕ್ಕ ಹಾಗೆ ಕುಣಿಯಬೇಕು. ಸಿನಿಮಾ ನಿರ್ಮಾಣ ಮಾಡುವುದು ಇಡೀ ಜಗತ್ತಿನ ವಿರುದ್ಧ ಮಾಡಿದಂತೆ. ಎಷ್ಟೋ ಸಲ ಒಂದೊಳ್ಳೆ ಸಿನಿಮಾ ಶುರುವಾದ ಹತ್ತಿಪ್ಪತ್ತು ದಿನಗಳಲ್ಲೇ ಚಿತ್ರ ಸ್ಥಗಿತಗೊಂಡಿದೆ ಎಂಬ ಸುಳ್ಳು ಸುದ್ದಿ ಬರುತ್ತದೆ. ಇದನ್ನೆಲ್ಲ ಅರಗಿಸಿಕೊಳ್ಳುವುದು ಕಷ್ಟ. ಟಾಕ್ಸಿಕ್ ಸಿನಿಮಾಕ್ಕೆ ಎರಡು ವರ್ಷನ್‌ಗಳಲ್ಲಿ 200 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ’ ಎಂದರು.

ಐ ಯ್ಯಾಮ್ ಫ್ರಂ ಪಡುವಾರಳ್ಳಿ

‘ಯೂ ನೋ ಮೈ ಇಂಗ್ಲೀಷ್ ಬಿ ಫೋರ್ ಯಾ, ಐ ಯ್ಯಾಮ್ ಫ್ರಂ ಪಡುವಾರಳ್ಳಿ’ ಎಂದು ಯಶ್‌ ಹೇಳಿದಾಗ ಫ್ಯಾನ್ಸ್ ಕಡೆಯಿಂದ ಜೋರಾದ ವಿಷಲ್, ಕೇಕೆ ಕೇಳಿಬಂತು.

ಗೀತು ಮೋಹನ್‌ ದಾಸ್ ಭಾವುಕ

ನಿರ್ದೇಶಕಿ ಗೀತು ಮೋಹನ್‌ ದಾಸ್ ಭಾವುಕವಾಗಿ ಮಾತನಾಡಿದರು. ‘ಎಲ್ಲರೂ ನನ್ನನ್ನು ಅನುಮಾನದಲ್ಲಿ ನೋಡುತ್ತಿದ್ದಾಗ ನನಗೆ ಅವಕಾಶ ಕೊಟ್ಟವರು ಯಶ್. ಅವರ ಬಗೆಗೆ ನನಗೆ ಬಹಳ ಆಳವಾದ ಎಮೋಶನ್ ಇದೆ’ ಎಂದರು.

ಕಳೆದ 10 ವರ್ಷಗಳಿಂದ ಸಿನಿಮಾ ಪ್ರಚಾರದಿಂದ ದೂರ ಉಳಿದಿದ್ದ ನಯನತಾರ ‘ಟಾಕ್ಸಿಕ್‌’ ಟ್ರೇಲರ್‌ ಲಾಂಚ್‌ನಲ್ಲಿ ಹಾಜರಿದ್ದರು. ‘ಯಶ್‌ ಕರೆಗೆ ಓಗೊಟ್ಟು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಯಶ್ ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಲಾರ್ಜರ್‌ ದ್ಯಾನ್ ಲೈಫ್‌ ವ್ಯಕ್ತಿತ್ವ ಹೊಂದಿರುವವರು. ಸಿನಿಮಾಕ್ಕೆ ರಾಕ್ಷಸನಂತೆ ಕೆಲಸ ಮಾಡುವ ಇಂಥಾ ನಟ, ನಿರ್ಮಾಪಕನನ್ನು ಮತ್ತೆಲ್ಲೂ ಕಂಡಿಲ್ಲ’ ಎಂದರು.

ನಿರ್ಮಾಪಕ ವೆಂಕಟ್ ಹೊಸ ಸಿನಿಮಾಳನ್ನು ಸದಾ ಬೆಂಬಲಿಸುವುದಾಗಿ ಹೇಳಿದರು.

ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ, ಬಾಲಾಜಿ ಮನೋಹರ್‌ ಸೇರಿದಂತೆ ಚಿತ್ರತಂಡದವರು ಭಾಗಿಯಾಗಿದ್ದರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಶಾಂತಿಕ್ರಾಂತಿ ಮರು ಬಿಡುಗಡೆ ಇಷ್ಟ, ಆ ಪ್ರಕ್ರಿಯೆ ಕಷ್ಟ: : ವಿಕ್ರಂ ರವಿಚಂದ್ರನ್
ಅಯೋಗ್ಯ 2ರಲ್ಲಿ ಗುಣಮಟ್ಟ, ನಗು ದುಪ್ಪಟ್ಟು : ಸತೀಶ್ ನೀನಾಸಂ