ಡಿ.15ಕ್ಕೆ 45 ಚಿತ್ರದ ಟ್ರೇಲರ್‌ ಬಿಡುಗಡೆ- 7 ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ನೇರ ಪ್ರಸಾರ

Published : Dec 06, 2025, 01:01 PM IST
45 Movie Event

ಸಾರಾಂಶ

ಡಿ.15ರಂದು ಶಿವರಾಜ್‌ ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿ ನಟನೆಯ ಬಹು ಭಾಷೆಯ ‘45’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಲಿದೆ. ಅಂದು ಸಂಜೆ ಬೆಂಗಳೂರಿನ ವಿದ್ಯಾಪೀಠದ ಬಳಿಯ ಕೆಂಪೇಗೌಡ ಮೈದಾನದಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿವೆ.

 ಸಿನಿವಾರ್ತೆ

ಡಿ.15ರಂದು ಶಿವರಾಜ್‌ ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿ ನಟನೆಯ ಬಹು ಭಾಷೆಯ ‘45’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಲಿದೆ. ಅಂದು ಸಂಜೆ ಬೆಂಗಳೂರಿನ ವಿದ್ಯಾಪೀಠದ ಬಳಿಯ ಕೆಂಪೇಗೌಡ ಮೈದಾನದಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿವೆ.

ಕ್ಯೂಬ್‌ ಮೂಲಕ ಈ ಟ್ರೇಲರ್‌ ಬಿಡುಗಡೆ

ಜೊತೆಗೆ ಮೈಸೂರು, ಮಂಗಳೂರು, ತುಮಕೂರು, ದಾವಣಗೆರೆ, ಶಿವಮೊಗ್ಗ, ಹೊಸಪೇಟೆ, ಹುಬ್ಬಳ್ಳಿ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಕ್ಯೂಬ್‌ ಮೂಲಕ ಈ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದ ನೇರ ಪ್ರಸಾರ ಆಯೋಜಿಸಲಾಗಿದೆ. ಮುಂಗಡವಾಗಿ ಪಾಸ್‌ ಪಡೆದುಕೊಂಡವರಿಗೆ ಮಾತ್ರ ಚಿತ್ರಮಂದಿರ ಪ್ರವೇಶ ದೊರೆಯಲಿದೆ.

ಅರ್ಜುನ್‌ ಜನ್ಯ ನಿರ್ದೇಶಿಸಿ, ರಮೇಶ್‌ ರೆಡ್ಡಿ ನಿರ್ಮಿಸಿರುವ ಈ ಚಿತ್ರ

ಅರ್ಜುನ್‌ ಜನ್ಯ ನಿರ್ದೇಶಿಸಿ, ರಮೇಶ್‌ ರೆಡ್ಡಿ ನಿರ್ಮಿಸಿರುವ ಈ ಚಿತ್ರವು ಡಿ.25ರಂದು ತೆರೆಗೆ ಬರುತ್ತಿದೆ. ‘ಆರಂಭದಿಂದಲೂ ಎಲ್ಲವನ್ನೂ ವಿಶೇಷವಾಗಿಯೇ ಮಾಡಿಕೊಂಡು ಬಂದಿದ್ದೇವೆ. ಟ್ರೇಲರ್‌ ಬಿಡುಗಡೆ ಕೂಡ ವಿಶೇಷವಾಗಿರಬೇಕು ಎನ್ನುವ ಕಾರಣಕ್ಕೆ 7 ಜಿಲ್ಲಾ ಕೇಂದ್ರಗಳಲ್ಲಿ ಒಟ್ಟಿಗೆ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲಾ ತಯಾರಿ ಆಗಿದೆ. ಇದುವರೆಗೂ ಇಂಥ ಪ್ರಯತ್ನ ಯಾರೂ ಮಾಡಿಲ್ಲ. ನಾವೇ ಮೊದಲು’ ಎಂದು ಅರ್ಜುನ್‌ ಜನ್ಯ ಹೇಳಿಕೊಂಡರು.

ರಮೇಶ್‌ ರೆಡ್ಡಿ, ‘ನಾವು ಅಂದುಕೊಂಡಂತೆ ಸಿನಿಮಾ ಬಂದಿದೆ. ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ ಮಾಡಿದ ಹೆಮ್ಮೆ ನನಗೆ ಇದೆ. ಜನ ನೋಡುತ್ತಾರೆಂಬ ಭರವಸೆ ಇದೆ’ ಎಂದರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಈ ಸಲದ ಚಿತ್ರೋತ್ಸವಕ್ಕೆ 2 ಲಕ್ಷ ಮಂದಿ ಬರುತ್ತಾರೆ: ಸಾಧು ಕೋಕಿಲ
ಕನ್ನಡಕ್ಕೆ ಹೊಸತನದ ಕತೆ ಕೊಟ್ಟ ಲ್ಯಾಂಡ್‌ಲಾರ್ಡ್‌