ರವಿಶಂಕರ್‌ ಗುರೂಜಿ ಬಯೋಪಿಕ್‌ನಲ್ಲಿ ನಟಿಸಲು ವಿಕ್ರಾಂತ್‌ ಮಾಸಿ ತಯಾರಿ

Published : Jul 12, 2025, 11:31 AM IST
Gurudev ravishankar guruji

ಸಾರಾಂಶ

ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಬಯೋಪಿಕ್‌ ‘ವೈಟ್‌’ ಸೆಟ್ಟೇರಲು ಸಿದ್ಧವಾಗಿದೆ. ಇದರಲ್ಲಿ ಬಾಲಿವುಡ್‌ ನಟ ವಿಕ್ರಾಂತ್‌ ಮಾಸಿ ಅವರು ರವಿಶಂಕರ ಗುರೂಜಿ ಪಾತ್ರ ನಿರ್ವಹಿಸಲಿದ್ದು, ಆ ಪಾತ್ರದಲ್ಲಿ ನಟಿಸಲು ಸೂಕ್ತ ತಯಾರಿ ನಡೆಸುತ್ತಿದ್ದಾರೆ.

 ಸಿನಿವಾರ್ತೆ

ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಬಯೋಪಿಕ್‌ ‘ವೈಟ್‌’ ಸೆಟ್ಟೇರಲು ಸಿದ್ಧವಾಗಿದೆ. ಇದರಲ್ಲಿ ಬಾಲಿವುಡ್‌ ನಟ ವಿಕ್ರಾಂತ್‌ ಮಾಸಿ ಅವರು ರವಿಶಂಕರ ಗುರೂಜಿ ಪಾತ್ರ ನಿರ್ವಹಿಸಲಿದ್ದು, ಆ ಪಾತ್ರದಲ್ಲಿ ನಟಿಸಲು ಸೂಕ್ತ ತಯಾರಿ ನಡೆಸುತ್ತಿದ್ದಾರೆ.

ಕೊಲಂಬಿಯಾದ ಶೀತಲ ಸಮರಕ್ಕೆ ಪೂರ್ಣ ವಿರಾಮ ಹಾಡಿದ ಗುರೂಜಿ ಅವರ ಬದುಕಿನ ಘಟನೆ ಮುಖ್ಯ ಕಥಾನಕವಾಗಿ ಮೂಡಿಬರಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಕ್ರಾಂತ್‌ ಮಾಸಿ, ‘ನಾನು ಅವರಂತಾಗಲು ಸಾಧ್ಯವೇ ಇಲ್ಲ. ಆದರೆ ನಟನಾಗಿ ಅವರನ್ನು ಜೀವಿಸಲು ಪ್ರಯತ್ನಿಸುತ್ತೇನೆ. ಈ ಪಾತ್ರ ಮಾಡಲು ಹೆಮ್ಮೆ ಇದೆ’ ಎಂದಿದ್ದಾರೆ.

ಬಾಲಿವುಡ್‌ ನಿರ್ದೇಶಕ ಸಿದ್ಧಾರ್ಥ್‌ ಆನಂದ್‌ ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್‌ ನಿರ್ಮಾಪಕರಾದ ಮಹಾವೀರ್‌ ಜೈನ್‌ ಹಾಗೂ ಸಿದ್ಧಾರ್ಥ್‌ ಆನಂದ್‌ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಆಗಸ್ಟ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಮಲಯಾಳಂನ ಸಿನಿಮಾ ನಿರ್ದೇಶಿಸುತ್ತಾರಾ ರಿಷಬ್‌? ಬಿಗ್‌ ಬಜೆಟ್‌ ಪ್ರಾಜೆಕ್ಟ್‌ಗೆ ಮರುಜೀವ
ಪಾಕ್‌ನ ಚಿತ್ರಮಂದಿರದಲ್ಲಿ ಬ್ಯಾನ್‌ ಆಗಿದ್ದ ಧುರಂಧರ್‌, ನೆಟ್‌ಫ್ಲಿಕ್ಸ್‌ ಒಟಿಟೀಲಿ ನಂ.1