ಕಾಂತಾರ 1 ಚಿತ್ರವನ್ನು ಆಸ್ಕರ್‌ ಲೆವಲ್ಲಿಗೆ ರೂಪಿಸುತ್ತಿದ್ದೇವೆ: ಹೊಂಬಾಳೆ ಫಿಲಂಸ್

Follow Us

ಸಾರಾಂಶ

ಕನ್ನಡದ ‘ಕಾಂತಾರ 1’ ಚಿತ್ರವನ್ನು ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಗೆ ಕಳುಹಿಸುವ ಲೆವಲ್ಲಿಗೆ ರೂಪಿಸಲಾಗುತ್ತಿದೆ.’

 ಸಿನಿವಾರ್ತೆ : ‘ಮೇಕಿಂಗ್‌ ಹಾಗೂ ತಾಂತ್ರಿಕ ವಿಚಾರದಲ್ಲಿ ಹೆಚ್ಚಿನ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಕನ್ನಡದ ‘ಕಾಂತಾರ 1’ ಚಿತ್ರವನ್ನು ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಗೆ ಕಳುಹಿಸುವ ಲೆವಲ್ಲಿಗೆ ರೂಪಿಸಲಾಗುತ್ತಿದೆ.’

- ಹೀಗೆ ಹೇಳಿದ್ದು ಹೊಂಬಾಳೆ ಫಿಲಮ್ಸ್‌ನ ಸಹ ಸಂಸ್ಥಾಪಕ ಚಲುವೇ ಗೌಡ. ಈ ಮೂಲಕ ಕಾಂತಾರ ಚಿತ್ರವನ್ನು ಆಸ್ಕರ್‌ಗೆ ಕಳುಹಿಸಲು ತಯಾರಿ ನಡೆಸಲಾಗುತ್ತಿದೆ ಎಂಬ ವಿಚಾರವನ್ನು ತಿಳಿಸಿದ್ದಾರೆ.

‘ಆಸ್ಕರ್‌ ಪ್ರಶಸ್ತಿಗೆ ಅರ್ಜಿ ಸಲ್ಲಿಸುವುದು, ಅದರ ಪ್ರಚಾರದ ಪ್ರಕ್ರಿಯೆಗಳ ಕುರಿತು ಮಾಹಿತಿ ಮತ್ತು ತಿಳುವಳಿಕೆ ಕೊರತೆ ಇದೆ. ಇಂಥ ವಿಷಯಗಳ ಬಗ್ಗೆ ಕಾರ್ಯಾಗಾರಗಳನ್ನು ಮಾಡಿದರೆ ಹೆಚ್ಚಿನ ಭಾರತೀಯ ಸಿನಿಮಾ ಸೃಷ್ಟಿಕರ್ತರಿಗೆ ಜಾಗತಿಕವಾಗಿ ತಮ್ಮ ಛಾಪು ಮೂಡಿಸಲು ಸಾಧ್ಯವಾಗುತ್ತದೆ. ನಮ್ಮ ಸಂಸ್ಥೆಯಿಂದ ನಿರ್ಮಾಣಗೊಳ್ಳುತ್ತಿರುವ ‘ಕಾಂತಾರ 1’ ಚಿತ್ರವನ್ನು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ತಲುಪುವಂತೆ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಇದು ಕನ್ನಡ ಚಿತ್ರರಂಗವು ಜಾಗತಿಕ ಮಟ್ಟದಲ್ಲಿ ಮಹತ್ವದ ಹೆಜ್ಜೆ ಇಡುವ ಪ್ರಯತ್ನವಾಗಿದೆ’ ಎಂದು ಚಲುವೇ ಗೌಡ ಹೇಳಿದರು.

ಮುಂಬೈನಲ್ಲಿ ನಡೆಯುತ್ತಿರುವ ವೇವ್ಸ್‌ ಸಮಿಟ್‌ 2025ರಲ್ಲಿ ಭಾಗವಹಿಸಿ ಚಲುವೇ ಗೌಡ ಅವರು ಈ ಹೇಳಿಕೆ ನೀಡಿದ್ದಾರೆ. ರಿಷಬ್‌ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ‘ಕಾಂತಾರ 1’ ಅಕ್ಟೋಬರ್‌ 2ರಂದು ಬಿಡುಗಡೆಯಾಗುತ್ತಿದೆ.