ಅಭಿಷೇಕ್‌, ಅವಿವಾ ದಂಪತಿ ಮಗನ ಹೆಸರೇನು ? ಅದ್ದೂರಿ ನಾಮಕರಣಕ್ಕೆ ಮನೆಮಗ ದರ್ಶನ್ ಗೈರು

Published : Mar 17, 2025, 11:22 AM IST
Abhishek Ambarish

ಸಾರಾಂಶ

‘ರಾಣಾ ಅಮರ್‌ ಅಂಬರೀಶ್‌’ ಇದು ಅಭಿಷೇಕ್‌, ಅವಿವಾ ದಂಪತಿ ಮಗನ, ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಮೊಮ್ಮಗನ ಹೆಸರು. ಬೆಂಗಳೂರಿನ ಖಾಸಗಿ ಹೊಟೇಲೊಂದರಲ್ಲಿ ಅದ್ದೂರಿಯಾಗಿ ನಡೆದ ನಾಮಕರಣ ಶಾಸ್ತ್ರದಲ್ಲಿ ತಾತ ಅಂಬರೀಶ್ ಅವರ ಮೂಲ ಹೆಸರು ಅಮರ್‌ನಾಥ್‌ ಅನ್ನೇ ಮೊಮ್ಮಗನಿಗೂ ಇಡಲಾಗಿದೆ.

 ಸಿನಿವಾರ್ತೆ : ‘ರಾಣಾ ಅಮರ್‌ ಅಂಬರೀಶ್‌’ ಇದು ಅಭಿಷೇಕ್‌, ಅವಿವಾ ದಂಪತಿ ಮಗನ, ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಮೊಮ್ಮಗನ ಹೆಸರು. ಬೆಂಗಳೂರಿನ ಖಾಸಗಿ ಹೊಟೇಲೊಂದರಲ್ಲಿ ಅದ್ದೂರಿಯಾಗಿ ನಡೆದ ನಾಮಕರಣ ಶಾಸ್ತ್ರದಲ್ಲಿ ತಾತ ಅಂಬರೀಶ್ ಅವರ ಮೂಲ ಹೆಸರು ಅಮರ್‌ನಾಥ್‌ ಅನ್ನೇ ಮೊಮ್ಮಗನಿಗೂ ಇಡಲಾಗಿದೆ. ‘ರಾಣಾ’ ಎಂಬುದಕ್ಕೆ ‘ರಾಜ’ ಎಂಬರ್ಥವಿದೆ.

ಈ ಕಾರ್ಯಕ್ರಮದಲ್ಲಿ ಸುಮಲತಾ ಅವರ ‘ಮನೆಮಗ’ ಎಂದೇ ಖ್ಯಾತರಾದ ದರ್ಶನ್‌ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಪತ್ನಿ ಪ್ರಿಯಾ ಜೊತೆಗೆ ಕಿಚ್ಚ ಸುದೀಪ್‌ ಆಗಮಿಸಿ ಮಗುವಿನ ಉಡುಗೊರೆ ನೀಡಿ ಹರಸಿದ್ದಾರೆ. ತೊಟ್ಟಿಲು ಮಾದರಿಯ ಬುಟ್ಟಿಯಲ್ಲಿ ಟೆಡ್ಡಿಬೇರ್, ಮೊಲದ ಮರಿಯ ಬೊಂಬೆಗಳಿರುವ ಉಡುಗೊರೆಯನ್ನು ಸುದೀಪ್ ನೀಡಿದ್ದಾರೆ. ಸುದೀಪ್‌ ಅವರನ್ನು ಸುಮಲತಾ ಹಾಗೂ ಅಭಿಷೇಕ್ ಆತ್ಮೀಯವಾಗಿ ಬರಮಾಡಿಕೊಂಡರು.

ಕೆಲ ದಿನಗಳ ಹಿಂದೆ ದರ್ಶನ್ ಸೋಷಲ್‌ ಮೀಡಿಯಾದಲ್ಲಿ ಸುಮಲತಾ ಅವರನ್ನು ಅನ್‌ಫಾಲೋ ಮಾಡಿದ್ದರು. ಇದೇ ಹೊತ್ತಿಗೆ ಸುಮಲತಾ ವ್ಯಂಗ್ಯನುಡಿಯೊಂದನ್ನು ಹರಿಬಿಟ್ಟಿದ್ದರು. ಆ ಬಳಿಕ ಅವು ದರ್ಶನ್‌ ಬಗ್ಗೆ ಹೇಳಿದ ಮಾತುಗಳಲ್ಲ. ದರ್ಶನ್‌ ಎಂದಿಗೂ ಮನೆ ಮಗನೇ ಎಂದು ಹೇಳಿದ್ದರು. ಆದರೆ ಮನೆಯ ಅದ್ದೂರಿ ಕಾರ್ಯಕ್ರಮದಲ್ಲಿ ಮನೆಮಗ ಭಾಗವಹಿಸದಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ.

ಈ ಕಾರ್ಯಕ್ರಮಕ್ಕೆ ಅಭಿಷೇಕ್‌ ಅಂಬರೀಶ್ ಹಾಗೂ ಅವಿವಾ ಬಿಡಪ ಆಪ್ತ ಬಳಗಕ್ಕಷ್ಟೇ ಆಹ್ವಾನ ಹೋಗಿತ್ತು. ಸಂಗೀತ ನಿರ್ದೇಶಕ ಗುರುಕಿರಣ್, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಭಾರತೀ ವಿಷ್ಣುವರ್ಧನ್ ಸೇರಿದಂತೆ ಅನೇಕ ಚಿತ್ರರಂಗದ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

PREV

Recommended Stories

ವೈರಲ್ ಆಗುತ್ತಿರುವ ಸುದೀಪ್‌ ಹೊಸ ಲುಕ್ಕು : ಗಮನ ಸೆಳೆಯುತ್ತಿರುವ ಹೊಸ ಹೇರ್ ಸ್ಟೈಲ್‌
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮಿಳು ನಟ ಮದನ್ ಬಾಬ್ ನಿಧನ