ಯಶ್ ಟಾಕ್ಸಿಕ್‌ ಸಿನಿಮಾದಲ್ಲಿ ಐವರು ನಾಯಕಿಯರು ..!

Published : Aug 21, 2025, 11:51 AM IST
Rukmini Vasanth Rocking Star Yash

ಸಾರಾಂಶ

ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾಕ್ಕೆ ರುಕ್ಮಿಣಿ ವಸಂತ್‌ ಎಂಟ್ರಿ ಕೊಟ್ಟದ್ದು ಸುದ್ದಿಯಾದ ಬೆನ್ನಲ್ಲೇ, ಈ ಸಿನಿಮಾಕ್ಕೆ ಐವರು ನಾಯಕಿಯರು ಎಂಬ ವಿಚಾರ ಬಹಿರಂಗಗೊಂಡಿದೆ.

  ಸಿನಿವಾರ್ತೆ

ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾಕ್ಕೆ ರುಕ್ಮಿಣಿ ವಸಂತ್‌ ಎಂಟ್ರಿ ಕೊಟ್ಟದ್ದು ಸುದ್ದಿಯಾದ ಬೆನ್ನಲ್ಲೇ, ಈ ಸಿನಿಮಾಕ್ಕೆ ಐವರು ನಾಯಕಿಯರು ಎಂಬ ವಿಚಾರ ಬಹಿರಂಗಗೊಂಡಿದೆ.

ಸೂಪರ್‌ ಹೀರೋ ಸಿನಿಮಾಗಳಲ್ಲಿ ನಾಯಕಿಯರನ್ನು ಗೊಂಬೆಗಳಂತೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಯಾಗಿ ‘ಟಾಕ್ಸಿಕ್‌’ ಹೊಸ ಮಾದರಿ ನಿರ್ಮಿಸಲು ಮುಂದಾಗಿದೆ. ಭಾರತೀಯ ಚಿತ್ರರಂಗದ ಪ್ರಸಿದ್ಧ ಐವರು ನಾಯಕಿಯರನ್ನು ಈ ಚಿತ್ರಕ್ಕೆ ಸೇರ್ಪಡೆಗೊಳಿಸಲಾಗಿದ್ದು, ಐದೂ ಪಾತ್ರಗಳೂ ಪ್ರಬಲವಾಗಿವೆ ಎನ್ನಲಾಗಿದೆ. ರುಕ್ಮಿಣಿ ವಸಂತ್‌, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ನಯನತಾರಾ, ಹ್ಯೂಮಾ ಖುರೇಷಿ ನಾಯಕಿಯರಾಗಿ ಅಭಿನಯ ಮೆರೆಯಲಿದ್ದಾರೆ.

ಕನ್ನಡದ ಹುಡುಗಿ ರುಕ್ಮಿಣಿ ವಸಂತ್‌ ಈ ಸಿನಿಮಾದ ನಿರ್ಣಾಯಕ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ಅವರ ಪಾತ್ರ ಆ್ಯಕ್ಷನ್‌ ಹಾಗೂ ಡ್ರಾಮಾಗಳಿಂದ ತುಂಬಿರಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಹುನಿರೀಕ್ಷಿತ ಚಿತ್ರ ಮಾರ್ಚ್‌ 19, 2026ಕ್ಕೆ ತೆರೆ ಕಾಣಲಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌
ಡಿ.15ಕ್ಕೆ 45 ಚಿತ್ರದ ಟ್ರೇಲರ್‌ ಬಿಡುಗಡೆ- 7 ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ನೇರ ಪ್ರಸಾರ