ಆಗಸ್ಟ್‌ 26ಕ್ಕೆ ಯಶ್ ಟಾಕ್ಸಿಕ್ ರಿಲೀಸ್ ಫಾದರ್ಸ್‌ ಡೇ ದಿನ ಘೋಷಣೆ

Published : Jun 22, 2026, 12:19 PM IST
toxic

ಸಾರಾಂಶ

ಯಶ್ ನಟನೆಯ ‘ಟಾಕ್ಸಿಕ್‌’ ಸಿನಿಮಾ ಇದೇ ವರ್ಷ ಆಗಸ್ಟ್‌ ತಿಂಗಳ 26ರಂದು ಬಿಡುಗಡೆಯಾಗಲಿದೆ. ಫಾದರ್ಸ್‌ ಡೇ ದಿನ ಯಶ್‌ ದ್ವಿಪಾತ್ರದಲ್ಲಿ ನಟಿಸಿರುವ ರಾಯ ಹಾಗೂ ಟಿಕೆಟ್‌ ಪಾತ್ರಗಳ ಪೋಸ್ಟರ್‌ ಜೊತೆಗೆ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.

  ಸಿನಿವಾರ್ತೆ

ಯಶ್ ನಟನೆಯ ‘ಟಾಕ್ಸಿಕ್‌’ ಸಿನಿಮಾ ಇದೇ ವರ್ಷ ಆಗಸ್ಟ್‌ ತಿಂಗಳ 26ರಂದು ಬಿಡುಗಡೆಯಾಗಲಿದೆ. ಫಾದರ್ಸ್‌ ಡೇ ದಿನ ಯಶ್‌ ದ್ವಿಪಾತ್ರದಲ್ಲಿ ನಟಿಸಿರುವ ರಾಯ ಹಾಗೂ ಟಿಕೆಟ್‌ ಪಾತ್ರಗಳ ಪೋಸ್ಟರ್‌ ಜೊತೆಗೆ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.

ಬುಧವಾರವೇ ಸಿನಿಮಾ ರಿಲೀಸ್‌

ಓಣಂ, ಈದ್‌, ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಬುಧವಾರವೇ ಸಿನಿಮಾ ರಿಲೀಸ್‌ ಆಗಲಿದೆ. ಈ ಹಿಂದೆ ಸಾಕಷ್ಟು ಬಾರಿ ಚಿತ್ರತಂಡ ಸಿನಿಮಾ ರಿಲೀಸ್‌ ದಿನಾಂಕ ಘೋಷಿಸಿ ಬಳಿಕ ನಾನಾ ಕಾರಣಗಳಿಗೆ ಬಿಡುಗಡೆ ಮುಂದಕ್ಕೆ ಹಾಕಿತ್ತು. ಸದ್ಯ ಈಗ ಘೋಷಿಸಿರುವ ದಿನಾಂಕ ಬದಲಾಗದಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಚಿತ್ರವನ್ನು ಗೀತು ಮೋಹನ್‌ ದಾಸ್‌ ನಿರ್ದೇಶನ

ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್‌ ಹಾಗೂ ಹುಮಾ ಖುರೇಷಿ ಮುಖ್ಯಪಾತ್ರದಲ್ಲಿರುವ ಈ ಚಿತ್ರವನ್ನು ಗೀತು ಮೋಹನ್‌ ದಾಸ್‌ ನಿರ್ದೇಶನ ಮಾಡಿದ್ದಾರೆ. ಕೆವಿಎನ್‌ ಸಂಸ್ಥೆ ಹಾಗೂ ಯಶ್‌ ಅವರ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಶನ್ಸ್‌ ಈ ಸಿನಿಮಾ ನಿರ್ಮಿಸಿವೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ವೀಟ್ - 14
ಗಿಲ್ಲಿ ನಟ ಈಗ ಹೀರೋ ಹೊಸ ಸಿನಿಮಾಕ್ಕೆ ಕೆವಿಎನ್ ಸಾಥ್