ಚುನಾವಣೆಗೆ ನಿಲ್ಲಲು ಅಡ್ಡಿ ಎಂದು ಮಗಳನ್ನೇ ಹತ್ಯೆಗೈದ ಪಾಪಿ ಅಪ್ಪ

KannadaprabhaNewsNetwork |  
Published : Feb 03, 2026, 03:15 AM IST
Maharashtra

ಸಾರಾಂಶ

ಅಧಿಕಾರದ ಆಸೆ ಮುಂದೆ ರಕ್ತಸಂಬಂಧವೂ ನಗಣ್ಯ ಎನ್ನುವುದನ್ನು ಇಂತಹ ಪಾಪಿ ತಂದೆ ನೋಡಿ ಹೇಳುವುದು ಎನಿಸುತ್ತದೆ. ಮಹಾರಾಷ್ಟ್ರದಲ್ಲಿ 3 ಮಕ್ಕಳ ತಂದೆಯೊಬ್ಬ 2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಆಗಲ್ಲ ಎಂದು ತನ್ನದೇ ಮಗುವನ್ನು ಕೊಂದ ಆಘಾತಕಾರಿ ಘಟನೆ ನಡೆದಿದೆ.

 ಮುಂಬೈ: ಅಧಿಕಾರದ ಆಸೆ ಮುಂದೆ ರಕ್ತಸಂಬಂಧವೂ ನಗಣ್ಯ ಎನ್ನುವುದನ್ನು ಇಂತಹ ಪಾಪಿ ತಂದೆ ನೋಡಿ ಹೇಳುವುದು ಎನಿಸುತ್ತದೆ. ಮಹಾರಾಷ್ಟ್ರದಲ್ಲಿ 3 ಮಕ್ಕಳ ತಂದೆಯೊಬ್ಬ 2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಆಗಲ್ಲ ಎಂದು ತನ್ನದೇ ಮಗುವನ್ನು ಕೊಂದ ಆಘಾತಕಾರಿ ಘಟನೆ ನಡೆದಿದೆ.

ಮಹಾರಾಷ್ಟ್ರದ ನಾಂದೇಡ್‌ನ ಕೆರೂರು ಗ್ರಾಮ 

ಮಹಾರಾಷ್ಟ್ರದ ನಾಂದೇಡ್‌ನ ಕೆರೂರು ಗ್ರಾಮದಲ್ಲಿ ವಿರಾಟ್‌ ಸಲೂನ್ ನಡೆಸುತ್ತಿದ್ದ ಪಾಂಡುರಂಗ ಕೊಂಡಮಂಗಲೆ ( 28) ಎಂಬಾತನಿಗೆ 1 ಗಂಡು, 2 ಹೆಣ್ಣುಮಕ್ಕಳು. ಈ ವರ್ಷದ ಜೂನ್‌ನಲ್ಲಿ ಗ್ರಾಮದಲ್ಲಿ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಗೆ ನಿಲ್ಲುವ ಆಸೆ ಆತನಿಗೆ ಬಂದಿತ್ತು ಆದರೆ ಅಲ್ಲಿನ ನಿಯಮ ಪ್ರಕಾರ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಗ್ರಾಮದ ಸರಪಂಚ್‌ ಆಗೋ ದುರಾಸೆಗೆ ಬಿದ್ದ ಈತ ಹಾಲಿ ಸರಪಂಚ್‌ ಬಳಿ ಸಲಹೆ ಪಡೆದು, ಆರಂಭದಲ್ಲಿ ಹಿರಿ ಮಗಳನ್ನು ದತ್ತು ನೀಡುವ ಬಗ್ಗೆ ಚಿಂತಿಸಿದ್ದಾರೆ. ಆದರೆ ಕೊಲೆ ಸ್ಕೆಚ್‌ ರೂಪಿಸಿದ್ದಾರೆ.

ಬೈಕ್‌ನಲ್ಲಿ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ ನೀರಿಗೆ ಬಾಲಕಿ ತಳ್ಳಿದ

ಅದರಂತೆ ಮಗಳನ್ನು ನಿಜಾಮಾಬಾದ್‌ಗೆ ಬೈಕ್‌ನಲ್ಲಿ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿದ್ದಾರೆ. ಆದರೆ ಪಾಪಿ ತಂದೆ ಗದ್ದೆಯಲ್ಲಿದ್ದ ನೀರಿಗೆ ಬಾಲಕಿ ತಳ್ಳಿ ಓಡಿದ್ದಾನೆ. ಮಗುವಿನ ದೇಹ ಕಾಲುವೆಯಲ್ಲಿ ತೇಲುತ್ತಿರುವುದಿಂದ ಗ್ರಾಮಸ್ಥರು ನೋಡಿ ಪೊಲೀಸರಿಗೆ ವಿಚಾರ ಮುಟ್ಟಿಸಿದಾಗ ಘಟನೆ ಬೆಳಕಿಗೆ ಬಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿ.ಜೆ.ರಾಯ್‌ ಕೇಸ್‌ : ಸಚಿವೆ ನಿರ್ಮಲಾಗೆ ಕೇರಳ ಸಿಎಂ ಪತ್ರ
ಭಾರತದ ಮಹಾ ದಿಗ್ವಿಜಯ ಯುರೋಪ್‌ ಬಳಿಕ ಇದೀಗ ಅಮೆರಿಕ ಜತೆಗೂ ಭಾರತದ ಡೀಲ್‌