ಅಚ್ಚರಿ- ಮೈಲೇಜ್ ಕುಸಿತ ಬಗ್ಗೆ ಪರ ವಿರೋಧ ಅಭಿಪ್ರಾಯ- ಎಥೆನಾಲ್ ಮಿಶ್ರಣದ ಕುರಿತು ಸಿ- ವೋಟರ್ ಸಮೀಕ್ಷೆಏನಿದು ಇ20 ವಿವಾದ
ಪರಿಸರ ಸ್ನೇಹಿ ಕ್ರಮದ ಭಾಗವಾಗಿ ಪೆಟ್ರೋಲ್‌ಗೆ ಶೇ.20ರಷ್ಟು ಎಥೆನಾಲ್ ಮಿಶ್ರಣಆದರೆ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪರ ವಿರೋಧ ಚರ್ಚೆ ಆರಂಭ
ಶೇ.20ರಷ್ಟು ಎಥೆನಾಲ್ ಮಿಶ್ರಣದಿಂದ ವಾಹನದ ಮೈಲೇಜ್ ಕುಸಿತ ಎಂದು ಕಳವಳಅದರ ಬೆನ್ನಲ್ಲೇ ಸಿ ವೋಟರ್ ಸಂಸ್ಥೆಯಿಂದ ದೇಶವ್ಯಾಪಿ ಜನರ ಅಭಿಪ್ರಾಯ ಸಂಗ್ರಹ
ಎನ್‌ಡಿಎ ಮತದಾರರ ಪೈಕಿ ಶೇ.55, ವಿಪಕ್ಷ ಮತದಾರರ ಪೈಕಿ ಶೇ.58 ಜನ ವಿರೋಧ
ವಿಪಕ್ಷ, ಎನ್‌ಡಿಎ ಸೇರಿ ಶೇ.55ರಷ್ಟು ಜನರಿಂದ ವಿರೋಧ, ಶೇ.17ರಷ್ಟು ಜನರ ಬೆಂಬಲನವದೆಹಲಿ: ದೇಶಾದ್ಯಂತ ಪರ-ವಿರೋಧ ಚರ್ಚೆಗೆ ಕಾರಣವಾಗಿರುವ ಇ20 ಪೆಟ್ರೋಲ್ ಬಗ್ಗೆ ಸಿ-ವೋಟರ್ ಸಮೀಕ್ಷಾ ಸಂಸ್ಥೆ ಸಮೀಕ್ಷೆಯೊಂದನ್ನು ನಡೆಸಿದ್ದು, ಆಡಳಿತಾರೂಢ ಶೇ.53ರಷ್ಟು ಎನ್‌ಡಿಎ ಮತದಾರರು ‘ಎಥೆನಾಲ್ ಮಿಶ್ರಿತ ಪೆಟ್ರೋಲ್’ ವಿರೋಧಿಸಿದ್ದಾರೆ ಎಂಬ ಕುತೂಹಲಕರ ಮಾಹಿತಿ ಲಭ್ಯವಾಗಿದೆ.
18 ವರ್ಷಕ್ಕಿಂತ ಮೇಲ್ಪಟ್ಟ 1,641 ಜನರನ್ನು ಸಂದರ್ಶಿಸಿ ಈ ಸಮೀಕ್ಷೆ ಸಿದ್ಧಪಡಿಸಲಾಗಿದೆ.ಇದರಲ್ಲಿ ತಾವು ಎನ್‌ಡಿಎ ಮತದಾರರು ಎಂದು ಹೇಳಿಕೊಂಡ ಶೇ.53ರಷ್ಟು ಜನರು ಇ20 ಪೆಟ್ರೋಲ್ ವಿರೋಧಿಸಿದ್ದಾರೆ. ಶೇ.17ರಷ್ಟು ಜನ ಪರವಾಗಿದ್ದಾರೆ. ಶೇ.30ರಷ್ಟು ಜನ ತಾವೇನೂ ಹೇಳಲ್ಲ ಎಂದಿದ್ದಾರೆ.
ಇನ್ನು ತಾವು ವಿಪಕ್ಷಗಳ ಮತದಾರರು ಎಂದು ಹೇಳಿಕೊಂಡ ಶೇ.58ರಷ್ಟು ಜನರು ಇ20 ವಿರೋಧಿಸಿದ್ದಾರೆ. ಶೇ.17ರಷ್ಟು ಜನ ಸಮ್ಮತಿಸಿದ್ದರೆ, ಶೇ.25ರಷ್ಟು ಜನ ಏನೂ ಹೇಳಲ್ಲ ಎಂದಿದ್ದಾರೆ.ವಿಪಕ್ಷ ಹಾಗೂ ಎನ್‌ಡಿಎ ಎರಡೂ ಮತದಾರರನ್ನು ಸೇರಿಸಿದರೆ ಶೇ.55ರಷ್ಟು ಜನರು ಇ20 ವಿರೋಧಿಸಿದ್ದಾರೆ. ಶೇ.17ರಷ್ಟು ಜನ ಬೆಂಬಲಿಸಿದ್ದರೆ, ಶೇ.28ರಷ್ಟು ಜನ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.
ಇತ್ತೀಚಿಗೆ ಇ20 ಪೆಟ್ರೋಲ್ ಬಗ್ಗೆ ಸಾಕಷ್ಟು ಚರ್ಚೆ ದೇಶದಲ್ಲಿ ನಡೆಯುತ್ತಿದೆ. ಇದರಿಂದ ಎಂಜಿನ್‌ಗೆ ಹಾನಿ ಆಗಲಿದೆ, ಮೈಲೇಜ್ ಕುಸಿಯಲಿದೆ ಎಂದು ಅನೇಕರು ವಾದಿಸಿದ್ದಾರೆ. ಆದರೆ ಎಂಜಿನ್‌ಗೆ ಹಾನಿ ಆಗುವುದು ಸುಳ್ಳು ಎಂದಿದ್ದ ಕೇಂದ್ರ ಸರ್ಕಾರ ಶೇ.3ರಿಂದ ಶೇ.5ರಷ್ಟು ಮೈಲೇಜ್ ಕುಸಿಯಲಿದೆ ಎಂದು ಸ್ಪಷ್ಟಪಡಿಸಿತ್ತು.