;Resize=(412,232))
ಢಾಕಾ: ‘ಬಾಂಗ್ಲಾದೇಶದಲ್ಲಿ ಭಾರತೀಯ ಪ್ರಜೆಗಳಿಗೆ ಕೆಲಸದ ಪರವಾನಗಿಯನ್ನು ಸ್ಥಗಿತಗೊಳಿಸಬೇಕೆಂದು’ ಹತ ಬಾಂಗ್ಲಾ ವಿದ್ಯಾರ್ಥಿ ನಾಯಕ ಉಸ್ಮಾನ್ ಹದಿ ಅವರ ವಿದ್ಯಾರ್ಥಿ ಸಂಘಟನೆ ‘ಇಂಕ್ವಿಲಾಬ್ ಮೊಂಚೊ’ ಸದಸ್ಯರು ಒತ್ತಾಯಿಸಿದ್ದಾರೆ.
ಅಲ್ಲದೆ, ಹದಿ ಹತ್ಯೆಯ ತನಿಖೆಯಲ್ಲಿ ಪ್ರಗತಿ ಸಾಧಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಭಾರತದ ವಿರುದ್ಧ ತೀವ್ರ ಟೀಕಾಕಾರನಾಗಿದ್ದ ಹದಿಯ ಕೊಲೆಗಾರರು ಭಾರತಕ್ಕೆ ಪರಾರಿಯಾಗಿದ್ದಾರೆ ಎಂದು ಬಾಂಗ್ಲಾದೇಶ ಪೊಲೀಸರು ಹೇಳಿದ ನಂತರ ಈ ಕರೆ ಬಂದಿದೆ. ಆದರೆ ಅವರು ಭಾರತಕ್ಕೆ ಬಂದಿಲ್ಲ ಎಂದು ಬಿಎಸ್ಎಫ್ ಈಗಾಗಲೇ ನಿರಾಕರಿಸಿದೆ.