ಶಿಶು ಮರಣ ದರ ಇಳಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ ಭಾರತದ ಶ್ರಮ ಪ್ರಗತಿ : ಭಾರತಕ್ಕೆ ವಿಶ್ವಸಂಸ್ಥೆ ಶ್ಲಾಘನೆ

KannadaprabhaNewsNetwork |  
Published : Mar 28, 2025, 12:31 AM ISTUpdated : Mar 28, 2025, 03:24 AM IST
ವಿಶ್ವಸಂಸ್ಥೆ | Kannada Prabha

ಸಾರಾಂಶ

ಶಿಶು ಮರಣ ದರ ಇಳಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ ಭಾರತದ ಶ್ರಮ ಹಾಗೂ ಪ್ರಗತಿ ‘ಮಾದರಿ’ ಎಂದು ವಿಶ್ವಸಂಸ್ಥೆ ಪ್ರಶಂಸಿಸಿದೆ.

ವಾಷಿಂಗ್ಟನ್‌: ಶಿಶು ಮರಣ ದರ ಇಳಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ ಭಾರತದ ಶ್ರಮ ಹಾಗೂ ಪ್ರಗತಿ ‘ಮಾದರಿ’ ಎಂದು ವಿಶ್ವಸಂಸ್ಥೆ ಪ್ರಶಂಸಿಸಿದೆ. ಮಂಗಳವಾರ ಬಿಡುಗಡೆಯಾದ ಶಿಶು ಮರಣ ಅಂದಾಜು ವರದಿಯಲ್ಲಿ ಭಾರತ, ನೇಪಾಳ, ಸೆನೆಗಲ್‌, ಘಾನಾ ಹಾಗೂ ಬುರುಂಡಿ ದೇಶಗಳು ತಡೆಗಟ್ಟಬಹುದಾದ ಮಕ್ಕಳ ಸಾವುಗಳನ್ನು ಕಡಿಮೆ ಮಾಡಲು ಅಳವಡಿಸಿಕೊಂಡ ವೈವಿಧ್ಯಮಯ ತಂತ್ರಗಳನ್ನು ಉಲ್ಲೇಖಿಸಿ, ‘ಮಾದರಿ ರಾಷ್ಟ್ರಗಳು’ ಎಂದು ಶ್ಲಾಘಿಸಿದೆ.

‘ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯಾದ ಆಯುಷ್ಮಾನ್‌ ಭಾರತದಡಿ ಪ್ರತಿ ಕುಟುಂಬಕ್ಕೆ 4.7 ಲಕ್ಷ ರು. ಮೊತ್ತದ ವಿಮೆ ಒದಗಿಸಲಾಗುತ್ತಿದೆ. ಈ ಮೂಲಕ ಆರೋಗ್ಯ ವ್ಯವಸ್ಥೆಯ ಮೇಲೆ ಹೂಡಿಕೆ ಮಾಡಿರುವ ಭಾರತವು ಲಕ್ಷಾಂತರ ಜೀವಗಳನ್ನು ಉಳಿಸಿದೆ 2000ದಿಂದೀಚೆಗೆ 5 ವರ್ಷಕ್ಕಿಂತ ಚಿಕ್ಕ ಮಕ್ಕಳ ಮರಣದರದಲ್ಲಿ ಶೇ.70ರಷ್ಟು ಮತ್ತು ನವಜಾತ ಶಿಶುಗಳ ಮರಣದರದಲ್ಲಿ ಶೇ.61ರಷ್ಟು ಇಳಿಕೆಯಾಗಿದೆ. ಆರೋಗ್ಯ ಸೌಲಭ್ಯಗಳ ವ್ಯಾಪ್ತಿ ಹೆಚ್ಚಳ, ಆರೋಗ್ಯ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಯ ಮೂಲಕ ಇದನ್ನು ಸಾಧಿಸಲಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸ್ಟಾರ್‌ವಾರ್‌ ರೀತಿ ಲೇಸರ್‌ ಅಸ್ತ್ರ ರಾಜ್ಯದಲ್ಲಿ ಅಭಿವೃದ್ಧಿ!
ಗೌರಿ ಲಂಕೇಶ್‌ ಹತ್ಯೆ ಆರೋಪಿ ಮಹಾರಾಷ್ಟ್ರ ಪಾಲಿಕೆ ಚುನಾವಣೆಗೆ