ರಾಹುಲ್‌ ಗಾಂಧಿ ಮಾತಿಗೆ ಅವಕಾಶ ಇಲ್ಲ : ಸ್ಪೀಕರ್‌ ಬಗ್ಗೆ ಸ್ಪೀಕರ್‌ಗೆ ವಿಪಕ್ಷ ದೂರು

KannadaprabhaNewsNetwork |  
Published : Mar 28, 2025, 12:30 AM ISTUpdated : Mar 28, 2025, 03:26 AM IST
Rahul Gandhi

ಸಾರಾಂಶ

ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ಸ್ಪೀಕರ್‌ ಓಂ ಬಿರ್ಲಾ ಅವರು ಸದನದಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ವಿಪಕ್ಷ ನಾಯಕರ ನಿಯೋಗ ಸ್ವತಃ ಸ್ಪೀಕರ್‌ ಅವರನ್ನೇ ಭೇಟಿಯಾಗಿ ದೂರು ಸಲ್ಲಿಸಿದೆ.

ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ಸ್ಪೀಕರ್‌ ಓಂ ಬಿರ್ಲಾ ಅವರು ಸದನದಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ವಿಪಕ್ಷ ನಾಯಕರ ನಿಯೋಗ ಸ್ವತಃ ಸ್ಪೀಕರ್‌ ಅವರನ್ನೇ ಭೇಟಿಯಾಗಿ ದೂರು ಸಲ್ಲಿಸಿದೆ. ಜೊತೆಗೆ, ಕಾಂಗ್ರೆಸ್‌ ನಾಯಕರಿಗೆ ಸದನದ ನಿಯಮಗಳನ್ನು ಪಾಲಿಸುವಂತೆ ನೀಡಿದ ಸೂಚನೆಯನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದೂ ಆರೋಪಿಸಿದೆ.

ಬುಧವಾರ ರಾಹುಲ್‌ಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡದ ಓಂ ಬಿರ್ಲಾ ರಾಹುಲ್‌ಗೆ ಸದನದ ಘನತೆ ಕಾಪಾಡುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ವಿಪಕ್ಷಗಳ ನಿಯೋಗ ಈ ದೂರು ಸಲ್ಲಿಸಿದೆ. ದೂರು ಸಲ್ಲಿಕೆ ಬಳಿಕ ಮಾತನಾಡಿದ ಲೋಕಸಭೆಯ ಕಾಂಗ್ರೆಸ್ ಉಪ ನಾಯಕ ಗೌರವ್‌ ಗೊಗೋಯ್‌, ‘ಆಡಳಿತ ಪಕ್ಷವು ಸದನದ ನಿಯಮಗಳನ್ನು ಉಲ್ಲಂಘಿಸಿದ ಬಗ್ಗೆ ಎಲ್ಲಾ ವಿಪಕ್ಷಗಳು ಕಳವಳ ವ್ಯಕ್ತಪಡಿಸಿವೆ.

ಸ್ಪೀಕರ್‌ ಅವರು 349ನೇ ನಿಯಮವನ್ನು ಪಾಲಿಸುವಂತೆ ಹೇಳಿದರು. ಆದರೆ ಯಾವ ಘಟನೆಗೆ ಸಂಬಂಧಿಸಿದಂತೆ ಹೇಳಿದರೆಂದು ತಿಳಿದಿಲ್ಲ. ಇದನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ. ವಿಪಕ್ಷ ನಾಯಕರು ಮಾತನಾಡಲು ನಿಂತಾಗ ಕಲಾಪವನ್ನು ಮುಂದೂಡಲಾದ ಬಗ್ಗೆ ದೂರು ನೀಡಲಾಗಿದೆ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಜನನಾಯಗನ್‌ಗೆ ಸಿಹಿ - ಕಹಿ! - ಜ.21ರವರೆಗೆ ವಿಜಯ್‌ ನಟನೆಯ ಚಿತ್ರ ಬಿಡುಗಡೆ ಇಲ್ಲ
ಇರಾನ್‌ನಲ್ಲಿ ಖಮೇನಿ ವಿರುದ್ಧ ಪ್ರತಿಭಟನೆ ಮತ್ತಷ್ಟು ತೀವ್ರ