ನವದೆಹಲಿ: ಶನಿವಾರ ಕೊನೆಗೊಂಡ 17ನೇ ಲೋಕಸಭೆಯಲ್ಲಿ ಕೇವಲ 272 ದಿನ ಕಲಾಪ ನಡೆದಿದೆ. ಇದು ದೇಶದ ಇತಿಹಾಸದಲ್ಲೇ ಐದು ವರ್ಷ ಪೂರ್ಣಾವಧಿ ಸರ್ಕಾರದ ಅವಧಿಯಲ್ಲಿ ಅತ್ಯಂತ ಕಡಿಮೆ ಕಲಾಪ ನಡೆದ ಉದಾಹರಣೆಯಾಗಿದೆ.
ಪಿಆರ್‌ಎಸ್ ಲೆಜಿಸ್ಲೇಟಿವ್ ಚಿಂತಕರ ಚಾವಡಿ ಸಿದ್ಧಪಡಿಸಿದ ವರದಿ ಅನ್ವಯ 17ನೇ ಲೋಕಸಭೆಯಲ್ಲಿ 272 ದಿನ, 16ನೇ ಲೋಕಸಭೆಯಲ್ಲಿ 331 ದಿನ, 15ನೇ ಹಾಗೂ 14ನೇ ಅವಧಿಯಲ್ಲಿ 332 ಹಾಗೂ 356 ದಿನಗಳು ಕಲಾಪ ನಡೆದಿದೆ.
ಇನ್ನು ಅತಿಹೆಚ್ಚು ದಿನ ಕಲಾಪ 1952-1957ರ ಮೊದಲ ಲೋಕಸಭೆಯಲ್ಲಿ 667 ದಿನಗಳು ನಡೆದಿದ್ದು ದಾಖಲೆಯಾಗಿದೆ. ಇನ್ನು ಮಾಜಿ ಪ್ರಧಾನಿ ಅಟಲ್ ಬಿಹಾರ ವಾಜಪೇಯಿ ಅವರ 13 ತಿಂಗಳ ಸರ್ಕಾರದಲ್ಲಿ ಅತಿ ಕಡಿಮೆ 88 ದಿನಗಳು ಮಾತ್ರ ಕಲಾಪ ನಡೆದಿತ್ತು.