ಮೋದಿ ಸರ್ಕಾರದ ಕೊನೆಯ ಅಧಿವೇಶನ ಮುಕ್ತಾಯ

KannadaprabhaNewsNetwork |  
Published : Feb 11, 2024, 01:49 AM ISTUpdated : Feb 11, 2024, 08:22 AM IST
Parliment

ಸಾರಾಂಶ

370ನೇ ವಿಧಿ ರದ್ದತಿ, ಮಹಿಳಾ ಮೀಸಲು ಸೇರಿದಂತೆ ಪ್ರಮುಖ ಮಸೂದೆಗಳನ್ನು 17ನೇ ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಕೊನೆಯ ಅಧಿವೇಶನ ಅಂತ್ಯಗೊಂಡಿದೆ.

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗಿರುವ ರಾಮಮಂದಿರ ಮೇಲಿನ ಚರ್ಚೆಯೊಂದಿಗೆ 17ನೇ ಲೋಕಸಭೆಯ ಕೊನೆಯ ಅಧಿವೇಶನ ಶನಿವಾರ ಅಂತ್ಯವಾಗಿದೆ. 17ನೇ ಲೋಕಸಭೆಯ ಕೊನೆಯ ಅಧಿವೇಶ ಜ.31ರಂದು ಆರಂಭವಾಗಿ 9 ದಿನಗಳ ಬಳಿಕ ಮುಕ್ತಾಯಗೊಂಡಿತು.

370ನೇ ವಿಧಿ ರದ್ದತಿ, ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ, ಹೊಸ ಸಂಸತ್‌ ಭವನ ಉದ್ಘಾನೆ ಈ ಲೋಕಸಭೆಯ ಅವಧಿಯಲ್ಲಿ ಘಟಿಸಿದ ಪ್ರಮುಖ ಅಂಶಗಳಾಗಿವೆ. 

ಇದಲ್ಲದೇ 100ಕ್ಕೂ ಹೆಚ್ಚು ಸಂಸದರ ಅಮಾನತು, ಸಂಸತ್ತಿನಲ್ಲಿ ಭದ್ರತಾ ಲೋಪ, ಪೌರತ್ವ ತಿದ್ದುಪಡಿ ಕಾಯ್ದೆ, 3 ರೈತ ಮಸೂದೆ, ಕೋವಿಡ್‌ ಸಾಂಕ್ರಾಮಿಕ ಸೇರಿದಂತೆ ಹಲವು ಘಟನೆಗಳಿಗೂ ಈ ಲೋಕಸಭೆ ಸಾಕ್ಷಿಯಾಯಿತು. 

12 ಮಸೂದೆ ಪಾಸ್‌: ಇದೇ ವೇಳೆ ಪ್ರಸ್ತುತ ಅಧಿವೇಶನದ ಬಗ್ಗೆ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ಬಜೆಟ್‌ ಅಧಿವೇಶನದ 10 ದಿನದ ಅವಧಿಯಲ್ಲಿ ಒಟ್ಟು 12 ಮಸೂದೆಗಳನ್ನು ಉಭಯ ಸದನಗಳಲ್ಲಿ ಅಂಗೀಕರಿಸಲಾಗಿದೆ ಎಂದು ತಿಳಿಸಿದರು. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ಹದಿನೇಳನೇ ಲೋಕಸಭೆಯ ಐದು ವರ್ಷಗಳ ಅವಧಿಯಲ್ಲಿ 221 ಮಸೂದೆಗಳನ್ನು ಅಂಗೀಕರಿಸಲಾಗಿದೆ. 

ಪ್ರಮುಖವಾಗಿ 370ನೇ ವಿಧಿ ರದ್ದು, ಹೊಸ ಕ್ರಿಮಿನಲ್‌ ಮಸೂದೆಗಳು, ನಾರಿಶಕ್ತಿ, ತ್ರಿವಳಿ ತಲಾಖ್‌ ನಿಷೇಧದಂತಹ ಮಹತ್ವದ ಮಸೂದೆಗಳು ಸದನದಲ್ಲಿ ಅಂಗೀಕಾರವಾಗಿದೆ. 

ಜೊತೆಗೆ ಕಡೆಯ ಬಜೆಟ್‌ ಅಧಿವೇಶನದಲ್ಲಿ ಯುಪಿಎ ಸರ್ಕಾರದ ಆರ್ಥಿಕತೆಯ ಕುರಿತು ಶ್ವೇತಪತ್ರ ಹೊರತಂದಿದ್ದೇವೆ’ ಎಂದು ತಿಳಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಜನನಾಯಗನ್‌ಗೆ ಸಿಹಿ-ಕಹಿ!
ಇರಾನ್‌ನಲ್ಲಿ ಖಮೇನಿ ವಿರುದ್ಧ ಪ್ರತಿಭಟನೆ ಮತ್ತಷ್ಟು ತೀವ್ರ