ಅಕ್ರಮ ಹಣ ವರ್ಗಾವಣೆ: ಕೇಂದ್ರದ ಮಾಜಿ ಸಚಿವ ಸಲ್ಮಾನ್‌ ಪತ್ನಿಗೆ ನೋಟಿಸ್‌

KannadaprabhaNewsNetwork |  
Published : Feb 11, 2024, 01:49 AM ISTUpdated : Feb 11, 2024, 08:25 AM IST
ಲೂಯಿಸ್‌

ಸಾರಾಂಶ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಮಾಜಿ ಗೃಹ ಸಚಿವ ಸಲ್ಮಾನ್ ಖುರ್ಷಿದ್‌ ಪತ್ನಿ ಲೂಯಿಸ್‌ ಖುರ್ಷಿದ್‌ಗೆ ಜಾರಿ ನಿರ್ದೇಶನಾಲಯ ನೋಟಿಸ್‌ ನೀಡಿದೆ.

ಲಖನೌ: ಅಕ್ರಮ ಹಣ ವರ್ಗಾವಣೆ ಪ್ರಕರಣದಡಿಯಲ್ಲಿ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಸಲ್ಮಾನ್‌ ಖುರ್ಷಿದ್ ಅವರ ಪತ್ನಿ ಲೂಯಿಸ್‌ ಖುರ್ಷಿದ್‌ ಅವರಿಗೆ ಫೆ.15ಕ್ಕೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್‌ ಜಾರಿ ಮಾಡಿದೆ.

ಕೃತಕ ಕೈಗಳು ಹಾಗೂ ಇತರ ಸಲಕರಣೆಗಳ ವಿತರಣೆಯಲ್ಲಿ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪದ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಲೂಯಿಸ್‌ ನೇತೃತ್ವದ ಟ್ರಸ್ಟ್‌ಗೆ ಇ.ಡಿ ಸಮನ್ಸ್‌ ಜಾರಿ ಮಾಡಿದೆ.

2009-10ರಲ್ಲಿ ಲೂಯಿಸ್‌ರ ಡಾ.ಜಾಕೀರ್ ಹುಸೇನ್ ಟ್ರಸ್ಟ್‌ ಆಯೋಜಿಸಿದ್ದ ಕೃತಕ ಅಂಗಗಳು ಮತ್ತು ಸಲಕರಣೆಗಳ ವಿತರಣೆ ಕಾರ್ಯಕ್ರಮದಲ್ಲಿ ನಕಲಿ ಸಹಿ ಮತ್ತು ಸೀಲು ಬಳಸಿ ಸರ್ಕಾರದ ಹಣ ದುರುಪಯೋಗಪಡಿಸಿಕೊಂಡ ಆರೋಪವನ್ನು ಖುರ್ಷಿದ್ ಎದುರಿಸುತ್ತಿದ್ದಾರೆ.

PREV

Recommended Stories

ದಿಲ್ಲಿ ಬೀದಿ ನಾಯಿ ಶೆಡ್‌ಗೆ : ಇಂದು ಸುಪ್ರೀಂನಲ್ಲಿ ತೀರ್ಪು
ಹೊಡೆದಿದ್ದಕ್ಕೆ ಗನ್‌ ತಂದು ಶಿಕ್ಷಕರ ಮೇಲೆ ವಿದ್ಯಾರ್ಥಿ ಗುಂಡಿನ ದಾಳಿ