ಹರ್ಯಾಣ ರೈತರಿಂದ ಮತ್ತೆ ‘ದಿಲ್ಲಿ ಚಲೋ’

KannadaprabhaNewsNetwork |  
Published : Feb 11, 2024, 01:48 AM ISTUpdated : Feb 11, 2024, 08:32 AM IST
ರೈತ ಪ್ರತಿಭಟನೆ | Kannada Prabha

ಸಾರಾಂಶ

ರಾಜ್ಯದ 7 ಜಿಲ್ಲೆಗಳಲ್ಲಿ 3 ದಿನ ಇಂಟರ್ನೆಟ್‌ ಬಂದ್‌ ಮಾಡಲಾಗಿದೆ. ಹಿಂದಿನ ಅಹಿತಕರ ಘಟನೆ ತಡೆಗೆ ಮುಂಜಾಗ್ರತೆ ವಹಿಸಲಾಗಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಚಂಡೀಗಢ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹರ್ಯಾಣದ 200ಕ್ಕೂ ರೈತ ಸಂಘಟನೆಗಳು ಫೆ.13ರಂದು ದಿಲ್ಲಿ ಚಲೋಗೆ ಕರೆ ನೀಡಿವೆ. ಈ ಪ್ರತಿಭಟನೆಯಲ್ಲಿ ಸಾವಿರಾರು ರೈತರು ಭಾಗಿಯಾಗುವ ನಿರೀಕ್ಷೆ ಇದೆ.

ಈ ಹಿನ್ನೆಲೆಯಲ್ಲಿ ಅಂಬಾಲಾ, ಕುರುಕ್ಷೇತ್ರ, ಕೈತಾಲ್‌, ಜಿಂದ್‌, ಹಿಸ್ಸಾರ್‌, ಫತೇಹಾಬಾದ್‌ ಹಾಗೂ ಸಿರ್ಸಾ ಜಿಲ್ಲೆಗಳಲ್ಲಿ ಫೆ.11ರಿಮದ 13ರವರೆಗೆ ಮೊಬೈಲ್‌ ಇಂಟರ್ನೆಟ್‌ ಮತ್ತು ಸಮೂಹ ಎಸ್‌ಎಂಎಸ್‌ ಸೇವೆಯನ್ನು ಬಂದ್‌ ಮಾಡಲು ಆದೇಶಿಸಲಾಗಿದೆ.

2020-21ರಲ್ಲಿ ರೈತರ ಪ್ರತಿಭಟನೆ ವೇಳೆ ಹಿಂಸೆ ಹಾಗೂ ಗಲಭೆ ತಾರಕ್ಕೆ ಏರಿತ್ತು. ಇದರಿಂದಾಗಿ ಹತ್ತಾರು ಜನ ಅಸುನೀಗಿದ್ದರು. ರೈತರ ಸಂಘರ್ಷ ಕೋಮುಬಣ್ಣಕ್ಕೆ ತಿರುಗಿ ದೆಹಲಿ ಅಕ್ಷರಶಃ ತತ್ತರಿಸಿತ್ತು.

ಈ ಬಾರಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಇಂಟರ್ನೆಟ್‌ ಬಂದ್‌ ಮಾಡಲು ಸರ್ಕಾರ ಮುಂದಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ