200 ವಿಮಾನ ರದ್ದು, 18 ಏರ್‌ಪೋರ್ಟ್‌ ತಾತ್ಕಾಲಿಕ ಬಂದ್‌

Published : May 08, 2025, 07:32 AM IST
 flights to jodhpur bikaner

ಸಾರಾಂಶ

18 ವಿಮಾನ ನಿಲ್ದಾಣಗಳನ್ನು ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕ ಬಂದ್‌ ಮಾಡಲಾಗಿದೆ. ಇದರ ಜತೆಗೇ ವಿಮಾನಯಾನ ಸಂಸ್ಥೆಗಳು ಕೂಡ ಅನೇಕ ಮಾರ್ಗಗಳಲ್ಲಿ ಹಾರಾಟ ನಿಲ್ಲಿಸಿವೆ.

ನವದೆಹಲಿ: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಪ್ರದೇಶಗಳನ್ನು ಗುರಿಯಾಗಿಸಿ ಭಾರತದಿಂದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬೆನ್ನಲ್ಲೇ ಶ್ರೀನಗರ, ಪಠಾಣ್‌ಕೋಟ್‌, ಲೇಹ್‌, ಜಮ್ಮು, ಚಂಡೀಗಢ, ಜೋಧಪುರ, ಶಿಮ್ಲಾ ಸೇರಿ 18 ವಿಮಾನ ನಿಲ್ದಾಣಗಳನ್ನು ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕ ಬಂದ್‌ ಮಾಡಲಾಗಿದೆ. ಇದರ ಜತೆಗೇ ವಿಮಾನಯಾನ ಸಂಸ್ಥೆಗಳು ಕೂಡ ಅನೇಕ ಮಾರ್ಗಗಳಲ್ಲಿ ಹಾರಾಟ ನಿಲ್ಲಿಸಿವೆ. ಇದರಿಂದ 200 ವಿಮಾನಗಳ ಸಂಚಾರ ರದ್ದಾಗಿದೆ.

ಪಾಕಿಸ್ತಾನದಲ್ಲಿನ ಭಯೋತ್ಪಾದಕ ದಾಳಿ ಬೆನ್ನಲ್ಲೇ ಭಾರತೀಯ ವಿಮಾನಯಾನ ಸಂಸ್ಥೆಯು ಶ್ರೀನಗರ ಸೇರಿದಂತೆ ಉತ್ತರ ಭಾರತದ ಕೆಲವು ವಿಮಾನ ನಿಲ್ದಾಣಗಳನ್ನು ಸೇನಾ ಕಾರ್ಯಾಚರಣೆಗಾಗಿ ಮುಚ್ಚಲಾಗಿದೆ.

ಇನ್ನು ದೆಹಲಿ ವಿಮಾನ ನಿಲ್ದಾಣದಿಂದ ಕನಿಚ್ಠ 35 ವಿಮಾನಗಳು ರದ್ದಾಗಿವೆ. ಅಮೆರಿಕನ್ ಏರ್‌ಲೈನ್ಸ್‌ ಸೇರಿದಂತೆ ವಿದೇಶಿ ವಿಮಾನಯಾನ ಸಂಸ್ಥೆಗಳು ದೆಹಲಿ ವಿಮಾನ ನಿಲ್ದಾಣದಿಂದ ತಮ್ಮ ಸೇವೆಗಳನ್ನು ರದ್ದುಗೊಳಿಸಿದೆ. ಮೂಲಗಳ ಪ್ರಕಾರ ದೆಹಲಿಯಿಂದ ಹೊರಡುವ 23 ದೇಶೀಯ, 4 ಅಂತಾರಾಷ್ಟ್ರೀಯ, ದೆಹಲಿಗೆ ಬರುವ 8 ದೇಶೀ ವಿಮಾನಗಳನ್ನು ಸೇವೆಯಲ್ಲಿ ವ್ಯತ್ಯಯವಾಗಿದೆ.

ದೇಶಿಯ ವಿಮಾನಯಾನ ಸಂಸ್ಥೆ ಇಂಡಿಗೋ ಸುಮಾರು 160 ದೇಶಿಯ ವಿಮಾನಗಳನ್ನು ರದ್ದುಗೊಳಿಸಿದೆ. ಸ್ಟೈಸ್‌ಜೆಟ್‌ ಸದ್ಯದ ಪರಿಸ್ಥಿತಿಯ ಕಾರಣದಿಂದ ಧರ್ಮಶಾಲಾ, ಲೇಹ್‌, ಜಮ್ಮು , ಶ್ರೀನಗರ ಮತ್ತ ಅಮೃತಸರ ನಿಲ್ದಾಣಗಳು ಮುಂದಿನ ಸೂಚನೆ ಬರುವ ತನಕ ಮುಚ್ಚಲಾಗಿದೆ ಎಂದು ಹೇಳಿದೆ.

10 ರ ತನಕ 9 ನಿಲ್ದಾಣಗಳಿಗೆ ಏರಿಂಡಿಯಾ ಹಾರಾಟವಿಲ್ಲ:

ಏರಿಂಡಿಯಾ ವಿಮಾನಯಾನ ಸಂಸ್ಥೆಯು ಮೇ 10ರ ತನಕ ಶ್ರೀನಗರ , ಅಮೃತಸರ ಸೇರಿದಂತೆ 9 ವಿಮಾನ ನಿಲ್ದಾಣಗಳಿಗೆ ಹಾರಾಟ ರದ್ದುಗೊಳಿಸಿದೆ. ಜಮ್ಮು, ಶ್ರೀನಗರ, ಲೇಹ್, ಜೋಧ್‌ಪುರ, ಅಮೃತಸರ, ಭುಜ್‌, ಜಾಮನಗರ, ಚಂಡೀಗಢ, ರಾಜ್‌ಕೋಟ್‌ ನಿಲ್ದಾಣಗಳಿಗೆ ಶನಿವಾರ ತನಕ ವಿಮಾನ ಸ್ಥಗಿತಗೊಳಿಸಿರುವುದಾಗಿ ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!