ಮಹಾರಾಷ್ಟ್ರದ 5 ಜಿಲ್ಲೆಗಳಲ್ಲಿ ಕಳೆದ 24 ವರ್ಷದಲ್ಲಿ 5 ಮಹಾ ಜಿಲ್ಲೇಲಿ ಪ್ರಾಣ ಕಳೆದುಕೊಂಡ 21,219 ರೈತರು

KannadaprabhaNewsNetwork |  
Published : Apr 05, 2025, 12:51 AM ISTUpdated : Apr 05, 2025, 04:48 AM IST
ಆತ್ಮಹತ್ಯೆ | Kannada Prabha

ಸಾರಾಂಶ

ಮಹಾರಾಷ್ಟ್ರದ 5 ಜಿಲ್ಲೆಗಳಲ್ಲಿ ಕಳೆದ 24 ವರ್ಷಗಳಲ್ಲಿ 21,219 ಅನ್ನದಾತರು ಮಳೆ ಕೊರತೆ, ಬೆಳೆ ನಾಶ, ಸಾಲಭಾದೆ ಸೇರಿದಂತೆ ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂಕಿ ಅಂಶವೊಂದು ಹೇಳಿದೆ.

ಅಮರಾವತಿ: ಮಹಾರಾಷ್ಟ್ರದ 5 ಜಿಲ್ಲೆಗಳಲ್ಲಿ ಕಳೆದ 24 ವರ್ಷಗಳಲ್ಲಿ 21,219 ಅನ್ನದಾತರು ಮಳೆ ಕೊರತೆ, ಬೆಳೆ ನಾಶ, ಸಾಲಭಾದೆ ಸೇರಿದಂತೆ ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂಕಿ ಅಂಶವೊಂದು ಹೇಳಿದೆ.

ವರದಿ ಅನ್ವಯ 2020ರ ಜನವರಿಯಿಂದ 2025ರ ಜನವರಿ ಅವಧಿಯಲ್ಲಿ ಅಮರಾವತಿಯಲ್ಲಿ 5,395, ಅಕೋಲಾದಲ್ಲಿ 3,123, ಬುಲ್ಡಾನಾದಲ್ಲಿ 4,442 , ವಾಶಿಮ್‌ನಲ್ಲಿ 2,048, ಯವತ್ಮಾಲ್‌ನಲ್ಲಿ 6,211 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷದ ಜನವರಿಯಲ್ಲಿಯೇ ಈ ಐದು ಜಿಲ್ಲೆಗಳಲ್ಲಿ ಒಟ್ಟಾರೆ 80 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಹೇಳಿದೆ.

ಈ ಪ್ರಕರಣಗಳಲ್ಲಿ ಒಟ್ಟು 9970 ಪ್ರಕರಣಗಳು ಸರ್ಕಾರದಿಂದ ಪರಿಹಾರಕ್ಕೆ ಅರ್ಹವಾಗಿದ್ದು, 9740 ಪ್ರಕರಣಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. 10963 ಆತ್ಮಹತ್ಯೆ ಪ್ರಕರಣಗಳು ಪರಿಹಾರಕ್ಕೆ ಅನರ್ಹ. 319 ಪ್ರಕರಣಗಳು ವಿಚಾರಣೆಗೆ ಬಾಕಿಯಿವೆ ಎಂದು ವರದಿ ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ