ನವದೆಹಲಿ: ಹರ್ಯಾಣದ ಫರೀದಾಬಾದ್ ಸಮೀಪ ಭಾನುವಾರ ಸಂಜೆ ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆಯ ಭೂಕಂಪ ಸಂಭವಿಸಿದೆ. ಪರಿಣಾಮ ಫರೀದಾಬಾದ್, ನೋಯ್ಡಾ, ದೆಹಲಿಯಲ್ಲೂ ಭೂಮಿ ಕಂಪಸಿದ ಅನುಭವ ಆಗಿದೆ. ಭೂಕಂಪನದ ಕೇಂದ್ರಬಿಂದು ಫರೀದಾಬಾದ್‌ನಿಂದ 9 ಕಿಲೋಮೀಟರ್ ಹಾಗೂ ದೆಹಲಿ ಆಗ್ನೇಯ ಭಾಗದ 30 ಕಿಲೋಮೀಟರ್ ದೂರದಲ್ಲಿತ್ತು. ಭೂಕಂಪದಿಂದಾಗಿ ಜನರು ಗಾಬರಿಯಿಂದ ಮನೆಯಿಂದ ಹೊರಗೆ ಓಡಿಬಂದ ಘಟನೆ ನಡೆಯಿತು. ಆದರೆ ಭೂಕಂಪದಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಅ.3ರಂದು ನೇಪಾಳದಲ್ಲಿ ಸಂಭವಿಸಿದ ಸರಣಿ ಭೂಕಂಪದ ಬೆನ್ನಲ್ಲೇ ದೆಹಲಿ ಸೇರಿ ಉತ್ತರ ಹಾಗೂ ಈಶಾನ್ಯ ಭಾರತದ ಹಲವೆಡೆ ಭೂಮಿ 6.2 ತೀವ್ರತೆಯಲ್ಲಿ ಭೂಮಿ ಕಂಪಿಸಿತ್ತು.