ಚೆನ್ನೈ: ಶನಿವಾರ ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆ ಪಾಕ್ ಕ್ರಿಕೆಟಿಗರು ಮೈದಾನಕ್ಕೆ ಇಳಿಯುವ ವೇಳೆ ಮತ್ತು ಔಟ್ ಆದ ವೇಳೆ ಮೈದಾನದಲ್ಲಿದ್ದ ಪ್ರೇಕ್ಷಕರು ಜೈಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಡಿಎಂಕೆ ನಾಯಕ, ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂಥ ಘೋಷಣೆ ಕೂಗಿರುವುದು ಭಾರತೀಯ ಕ್ರೀಡಾಸ್ಪೂರ್ತಿಯ ಅತ್ಯಂತ ಕಳಮಟ್ಟದ್ದಾಗಿದೆ. ಭಾರತ ತನ್ನ ಕ್ರೀಡಾಸ್ಪೂರ್ತಿ ಹಾಗೂ ಭ್ರಾತೃತ್ವಕ್ಕೆ ಹೆಸರುವಾಸಿಯಾಗಿರುವುದು. ಕ್ರೀಡೆಯನ್ನು ಪರಿಶುದ್ಧವಾಗಿ ಪರಿಗಣಿಸಬೇಕು’ ಎಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ನೆಟ್ಟಿಗರೊಬ್ಬರು, ಲಂಕಾ ಆಟಗಾರರಿಗೆ ತಮಿಳ್ನಾಡಲ್ಲಿ ಆಡಲು ಬಿಡದ ವ್ಯಕ್ತಿಗಳಿಂದ ಇಂಥ ಮಾತು ಬೇಕಿಲ್ಲ ಎಂದಿದ್ದಾರೆ.