ಜೆರುಸಲೇಂ: ‘ಕಳೆದ ಶನಿವಾರ ನಾವು ಇಸ್ರೇಲ್ ಮೇಲೆ ದಾಳಿ ನಡೆಸಿದಾಗ ಅಲ್ಲಿ ನಮಗೆ ಸಿಕ್ಕ ಸಿಕ್ಕ ಯುವತಿಯರ ಮೇಲೆ ಅತ್ಯಾಚಾರ ಮಾಡಿದೆವು. ಮಕ್ಕಳು, ಶಿಶುಗಳು, ವೃದ್ಧರು ಮತ್ತು ಮಹಿಳೆಯರು ಸೇರಿದಂತೆ ನಮ್ಮ ಕಣ್ಣಿಗೆ ಬಿದ್ದ ಎಲ್ಲರನ್ನೂ ನಾವು ಕೊಂದು ಹಾಕಿದೆವು. ಅವರ ತಲೆ ಕತ್ತರಿಸಿದೆವು’.... ಇದು ಇಸ್ರೇಲ್ ಮೇಲಿನ ತಮ್ಮ ಭಯಾನಕ ದಾಳಿಯ ಕ್ರೂರತೆ ಹೇಗಿತ್ತು ಎಂಬುದನ್ನು ಸ್ವತಃ ಹಮಾಸ್ ಉಗ್ರನೇ ವಿವರಿಸಿರುವ ರೀತಿ. ಇಸ್ರೇಲಿ ಪಡೆಗಳಿಗೆ ಸೆರೆಸಿಕ್ಕ ಓರ್ವ ಹಮಾಸ್ ಉಗ್ರ ವಿಚಾರಣೆ ಈ ಭಯಾನಕ ಅಂಶಗಳನ್ನು ಬಹಿರಂಗಪಡಿಸಿದ್ದಾನೆ. ಆತನ ವಿಚಾರಣೆ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸೋರಿಕೆಯಾಗದೆ. ತನ್ನ ಹೆಸರು ಮೊಹಮ್ಮದ್ ನಹೇದ್ ಅಹ್ಮದ್ ಎಲ್- ಅರ್ಷಾ. ತಾನು ಗಾಜಾಪಟ್ಟಿಯ ರಫಾಹ್ ನಿವಾಸಿ ಎಂದು ಹೇಳಿಕೊಂಡಿರುವ ಉಗ್ರ ‘ಜನರ ತಲೆಗಳನ್ನು ಕತ್ತರಿಸಿ ನೆಲದ ಮೇಲೆ ಎಸೆದೆವು. ಎದುರಿಗೆ ಬಂದವರನ್ನು ಚಂಡಾಡಿದೆವು. ಸಿಕ್ಕ ಸಿಕ್ಕ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದೆವು’ ಎಂದೂ ಉಗ್ರ ಹೇಳಿದ್ದಾನೆ.