ಹಮಾಸ್‌ಗಿಂತ ಅಲ್‌ಖೈದಾ ಸಂಘಟನೆಯೇ ಉತ್ತಮ ಎನಿಸುತ್ತದೆ: ಬೈಡೆನ್‌

KannadaprabhaNewsNetwork | Updated : Oct 15 2023, 12:46 AM IST

ಸಾರಾಂಶ

ಇಸ್ರೇಲ್‌ ಮತ್ತು ಪ್ಯಾಲೆಸ್ತೀನಿನ ಹಮಾಸ್‌ ಉಗ್ರರ ನಡುವಿನ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹಮಾಸ್‌ ಸಂಘಟನೆ ಬರ್ಬರ ಕೃತ್ಯಗಳ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ‘ಹಮಾಸ್‌ಗಿಂತ ಅಲ್‌ ಖೈದಾ ಸಂಘಟನೆಯೇ ಉತ್ತಮ ಎನ್ನಿಸುತ್ತದೆ ಎಂದಿದ್ದಾರೆ.
ವಾಷಿಂಗ್ಟನ್‌: ಇಸ್ರೇಲ್‌ ಮತ್ತು ಪ್ಯಾಲೆಸ್ತೀನಿನ ಹಮಾಸ್‌ ಉಗ್ರರ ನಡುವಿನ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹಮಾಸ್‌ ಸಂಘಟನೆ ಬರ್ಬರ ಕೃತ್ಯಗಳ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ‘ಹಮಾಸ್‌ಗಿಂತ ಅಲ್‌ ಖೈದಾ ಸಂಘಟನೆಯೇ ಉತ್ತಮ ಎನ್ನಿಸುತ್ತದೆ ಎಂದಿದ್ದಾರೆ. ಶನಿವಾರ ಫಿಲಡೆಲ್ಫಿಯಾದಲ್ಲಿ ಮಾತನಾಡಿದ ಬೈಡೆನ್‌, ‘ಇಸ್ರೇಲ್‌ನಲ್ಲಿ ಹಮಾಸ್‌ ಉಗ್ರರು ಹೀನ ಕೃತ್ಯ ಎಸಗಿದ್ದಾರೆ. ಹಮಾಸ್‌ ಉಗ್ರರ ಗುಂಪು ಕಳೆದ ವಾರ ಇಸ್ರೇಲ್‌ ಮೇಲೆ ನಡೆಸಿದ ದಾಳಿಯಲ್ಲಿ ಸಾವಿರಕ್ಕೂ ಹೆಚ್ಚು ಅಮಾಯಕರು ಜೀವ ತೆತ್ತಿದ್ದಾರೆ. ಇದರಲ್ಲಿ 27 ಮಂದಿ ಅಮೆರಿಕನ್ನರೂ ಸೇರಿದ್ದಾರೆ. ಇದು ಅಲ್‌ಖೈದಾಗಿಂತ ಹೀನ ಕೃತ್ಯವಾಗಿದೆ. ಹಮಾಸ್‌ಗಿಂತ ಅಲ್‌ಖೈದಾ ಉಗ್ರರೇ ಉತ್ತಮರು ಎನ್ನಿಸುತ್ತದೆ.’ ಎಂದರು. ‘ಅಮೆರಿಕ ಯಾವಾಗಲೂ ಇಸ್ರೇಲ್‌ಗೆ ಬೆಂಬಲವಾಗಿ ನಿಲ್ಲುತ್ತದೆ. ಅಮೆರಿಕದ ಅಧಿಕಾರಿಗಳು ಅಲ್ಲಿದ್ದು ನೆರವಾಗುತ್ತಿದ್ದಾರೆ. ಗಾಜಾದಲ್ಲಿನ ಮಾನವೀಯ ಬಿಕ್ಕಟ್ಟನ್ನು ಪರಿಹರಿಸುವುದು ಸದ್ಯದ ನನ್ನ ಆದ್ಯತೆಯಾಗಿದೆ’ ಎಂದು ಹೇಳಿದರು.

Share this article