ಟೆಲ್ ಅವಿವ್: ಇಸ್ರೇಲ್ ಗಡಿಯೊಳಗೆ ನುಗ್ಗಿ ಏಕಾಏಕಿ ದಾಳಿ ನಡೆಸಿದ್ದ ಹಮಾಸ್ ಉಗ್ರರು, ಈ ವೇಳೆ ತಮ್ಮ ಎದುರಿಗೆ ಸಿಕ್ಕವರ ಪೈಕಿ ಒಬ್ಬರೂ ಬದುಕಬಾರದೆಂಬ ಹೀನಮನಸ್ಥಿತಿಯಿಂದ ದಾಳಿ ಮಾಡಿದ್ದರು. ಶೌಚಾಲಯದಲ್ಲಿ ಯಾರಾದರೂ ಇದ್ದರೆ ಅವರೂ ಸಾಯಬೇಕೆಂದು ದಾಳಿ ನಡೆಸಿದ್ದರು ಎಂಬ ವಿಷಯವು ವಿಡಿಯೋವೊಂದರಿಂದ ಬೆಳಕಿಗೆ ಬಂದಿದೆ. ಕಳೆದ ಶನಿವಾರ ಗಾಜಾಪಟ್ಟಿ ಪ್ರದೇಶದ ಬಳಿ ನೋವಾ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಅದರ ಮೇಲೆ ದಾಳಿ ನಡೆಸಿದ್ದ ಉಗ್ರರು ಅದೊಂದೇ ಸ್ಥಳದಲ್ಲಿ ಮನಬಂದಂತೆ ಗುಂಡಿನ ದಾಳಿ 260 ಜನರ ಬಲಿ ಪಡೆದಿದ್ದರು. ಆ ಸ್ಥಳದಲ್ಲಿ ಒಬ್ಬರೇ ಒಬ್ಬರು ಕೂಡಾ ಉಳಿಯಬಾರದು ಎನ್ನುವ ಕಾರಣಕ್ಕೆ ಅಲ್ಲಿದ್ದ ತಾತ್ಕಾಲಿಕ ಶೌಚಾಲಯಗಳ ಮೇಲೂ ಗುಂಡು ಹಾರಿಸಿದರು. ದಾಳಿ ಬಳಿಕ ಶೌಚಾಲಯದೊಳಗೆ ಇದ್ದವರು ಬದುಕಿದ್ದಾರೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡಿ ತೆರಳಿದ್ದರು ಎಂಬ ವಿಷಯ ಇದೀಗ ಬೆಳಕಿಗೆ ಬಂದ ವಿಡಿಯೋವೊಂದರಿಂದ ಬಹಿರಂಗವಾಗಿದೆ.