ಭಾರತದಲ್ಲಿ ಇರಬೇಕು ಎಂದರೆ ಭಾರತ ಮಾತೆಗೆ ಜೈ ಎನ್ನಿ: ಸಚಿವ

KannadaprabhaNewsNetwork | Published : Oct 15, 2023 12:45 AM

ಸಾರಾಂಶ

ಭಾರತದಲ್ಲಿ ಇರಬೇಕು ಎಂದರೆ ಭಾರತ ಮಾತಾ ಕೀ ಜೈ ಎನ್ನಬೇಕು ಎಂದು ಕೇಂದ್ರ ಸಚಿವ ಕೈಲಾಶ್‌ ಚೌಧರಿ ಹೇಳಿದ್ದಾರೆ.
ಹೈದರಾಬಾದ್‌: ಭಾರತದಲ್ಲಿ ಇರಬೇಕು ಎಂದರೆ ಭಾರತ ಮಾತಾ ಕೀ ಜೈ ಎನ್ನಬೇಕು ಎಂದು ಕೇಂದ್ರ ಸಚಿವ ಕೈಲಾಶ್‌ ಚೌಧರಿ ಹೇಳಿದ್ದಾರೆ. ಚುನಾವಣೆ ಘೋಷಣೆ ಆಗಿರುವ ತೆಲಂಗಾಣದಲ್ಲಿ ಬಿಜೆಪಿ ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ರಾಷ್ಟ್ರವಾದಿ ಸಿದ್ಧಾಂತ ಇರುವ ಪಕ್ಷ ಅಧಿಕಾರಕ್ಕೆ ಬರಬೇಕು. ಭಾರತದಲ್ಲಿದ್ದು ಪಾಕಿಸ್ತಾನ್ ಜಿ಼ಂದಾಬಾದ್‌ ಘೊಷಣೆ ಕೂಗುವುದು ಉಚಿತವಲ್ಲ. ಹಾಗೆ ಕೂಗಿದವರು ಪಾಕಿಸ್ತಾನಕ್ಕೆ ಹೋಗಬಹುದು’ ಎಂದು ಹೇಳಿದರು. ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ: ಕಾಂಗ್ರೆಸ್‌ ಮತ್ತು ಮಿತ್ರಕೂಟಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು ‘ಕಾಂಗ್ರೆಸ್‌ಗೆ ಹೆಸರು ಕದಿಯುವ ಚಾಳಿ ಮುಂಚಿನಿಂದಲೂ ಬಂದಿದೆ. ಆಗ ಗಾಂಧಿಯ ಹೆಸರನ್ನು ಕದ್ದರು. ಈಗ ಇಂಡಿಯಾ ಎಂಬ ಹೆಸರನ್ನೇ ಕದ್ದಿದ್ದಾರೆ’ ಎಂದು ಹರಿಹಾಯ್ದರು.

Share this article