ಬೆಂಗಳೂರಿನ ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್‌ನ (ಸಿಡಬ್ಲ್ಯುಎಸ್‌) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೃತಿ ಕಾರಂತ್ ಅವರು ಲಂಡನ್‌ನ ರಾಯಲ್ ಜಿಯಾಗ್ರಾಫಿಕಲ್ ಸೊಸೈಟಿಯಿಂದ ಕೊಡಮಾಡುವ ಪ್ರತಿಷ್ಠಿತ ಎಸ್ಮಂಡ್ ಬಿ. ಮಾರ್ಟಿನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯನ್ನು ಪಡೆದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

- ಭೂಸಂರಕ್ಷಣೆ ಯತ್ನಕ್ಕೆ ರಾಯಲ್‌ ಸೊಸೈಟಿ ಗೌರವ

- ಈ ಪ್ರಶಸ್ತಿ ಪಡೆದ ಭಾರತದ ಮೊದಲ ವ್ಯಕ್ತಿ ಇವರು

ಲಂಡನ್‌: ಬೆಂಗಳೂರಿನ ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್‌ನ (ಸಿಡಬ್ಲ್ಯುಎಸ್‌) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೃತಿ ಕಾರಂತ್ ಅವರು ಲಂಡನ್‌ನ ರಾಯಲ್ ಜಿಯಾಗ್ರಾಫಿಕಲ್ ಸೊಸೈಟಿಯಿಂದ ಕೊಡಮಾಡುವ ಪ್ರತಿಷ್ಠಿತ ಎಸ್ಮಂಡ್ ಬಿ. ಮಾರ್ಟಿನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯನ್ನು ಪಡೆದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಡಾ. ಕೃತಿ ಖ್ಯಾತ ಪರಿಸರ ವಿಜ್ಞಾನಿ ಡಾ. ಉಲ್ಲಾಸ್‌ ಕಾರಂತ್‌ ಅವರ ಪುತ್ರಿ. ಇನ್ನೊಬ್ಬ ಸಂಶೋಧಕ, ಲಂಡನ್‌ನ ರಾಯಲ್ ಬೊಟಾನಿಕ್ ಗಾರ್ಡನ್ಸ್‌ನ ಪ್ರಾಧ್ಯಾಪಕ ಅಲೆಕ್ಸಾಂಡ್ರೆ ಆಂಟೊನೆಲ್ಲಿ ಅವರೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ವಿಶ್ವದ ಪರಿಸರ ವ್ಯವಸ್ಥೆಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದಕ್ಕಾಗಿ ಮತ್ತು ಜೀವವೈವಿಧ್ಯದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಗಿ ಕೃತಿಯವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಏ.13ರಂದು ಲಂಡನ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.