ಭಾರತದ 60 ದಾಖಲೆಗಳು 2024ರ ಗಿನ್ನೆಸ್‌ ಪುಸ್ತಕಕ್ಕೆ ಆಯ್ಕೆ

KannadaprabhaNewsNetwork | Published : Oct 15, 2023 12:45 AM

ಸಾರಾಂಶ

ಭಾರತದ ವಿವಿಧ ಕ್ಷೇತ್ರಗಳ 60 ವಿಶ್ವದಾಖಲೆಗಳು 2024ರ ಗಿನ್ನೆಸ್‌ ವಿಶ್ವದಾಖಲೆಗಳ ಪುಸ್ತಕಕ್ಕೆ ಆಯ್ಕೆಯಾಗಿವೆ. ವಿಶ್ವದಲ್ಲಿ ಒಟ್ಟಾರೆ 9 ವಿವಿಧ ಕ್ಷೇತ್ರಗಳಲ್ಲಿ 2,638 ದಾಖಲೆಗಳು ಪುಸ್ತಕಕ್ಕೆ ಆಯ್ಕೆಯಾಗಿದ್ದು, ಅದರಲ್ಲಿ ಭಾರತದ 60 ಸೇರಿವೆ.
ನವದೆಹಲಿ: ಭಾರತದ ವಿವಿಧ ಕ್ಷೇತ್ರಗಳ 60 ವಿಶ್ವದಾಖಲೆಗಳು 2024ರ ಗಿನ್ನೆಸ್‌ ವಿಶ್ವದಾಖಲೆಗಳ ಪುಸ್ತಕಕ್ಕೆ ಆಯ್ಕೆಯಾಗಿವೆ. ವಿಶ್ವದಲ್ಲಿ ಒಟ್ಟಾರೆ 9 ವಿವಿಧ ಕ್ಷೇತ್ರಗಳಲ್ಲಿ 2,638 ದಾಖಲೆಗಳು ಪುಸ್ತಕಕ್ಕೆ ಆಯ್ಕೆಯಾಗಿದ್ದು, ಅದರಲ್ಲಿ ಭಾರತದ 60 ಸೇರಿವೆ. ಭಾರತದ ದಾಖಲೆಗಳ ಪೈಕಿ ವಿಶ್ವದಲ್ಲಿ ಅತಿ ಹೆಚ್ಚು ಮಳೆ ಬಿದ್ದ ಪ್ರದೇಶ ಎಂಬ ದಾಖಲೆಗೆ ಚಿರಾಪುಂಜಿ ಪಾತ್ರವಾಗಿದೆ. ಈ ಪ್ರದೇಶದಲ್ಲಿ 1995ರ ಜೂನ್‌ 15-16ರ 48 ಗಂಟೆಗಳ ಅವಧಿಯಲ್ಲಿ 2,493 ಮೀಟರ್‌ (8 ಅಡಿ 2 ಇಂಚು) ಮಳೆಯಾಗಿದೆ. ಹಾಗೆಯೇ ಪ್ರಪಂಚವನ್ನು ಕಾರಿನಲ್ಲಿ ಅತಿ ವೇಗವಾಗಿ ಸುತ್ತಿ ಬಂದ ದಾಖಲೆಗೆ ಭಾರತದ ಸಾಲೂ ಮತ್ತು ನೀನಾ ಚೌಧರಿ ಪಾತ್ರರಾಗಿದ್ದಾರೆ. ಈ ಪುಸ್ತಕವನ್ನು ಪೆಂಗ್ವಿನ್‌ ರಾಂಡಮ್‌ ಹೌಸ್‌ ಸಂಸ್ಥೆ ಪ್ರಕಟ ಮಾಡುತ್ತದೆ.

Share this article