ಇಂದು 3 ರಾಜ್ಯಗಳಲ್ಲಿ ಚುನಾವಣೆ

KannadaprabhaNewsNetwork |  
Published : Apr 09, 2026, 01:15 AM IST
EVM

ಸಾರಾಂಶ

ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಗಳು ಗುರುವಾರ ಏಕಹಂತದಲ್ಲಿ ನಡೆಯಲಿವೆ.  ಅಸ್ಸಾಂನಲ್ಲಿ 126 ಸ್ಥಾನಗಳು, ಕೇರಳದಲ್ಲಿ 140 ಸ್ಥಾನಗಳು ಮತ್ತು ಪುದುಚೇರಿಯಲ್ಲಿ 30 ಸ್ಥಾನಗಳಿಗೆ ಮತದಾನ ನಡೆಯಲಿವೆ.

 ನವದೆಹಲಿ : ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಗಳು ಗುರುವಾರ ಏಕಹಂತದಲ್ಲಿ ನಡೆಯಲಿವೆ.

ಅಸ್ಸಾಂನಲ್ಲಿ 126 ಸ್ಥಾನಗಳು, ಕೇರಳದಲ್ಲಿ 140 ಸ್ಥಾನಗಳು ಮತ್ತು ಪುದುಚೇರಿಯಲ್ಲಿ 30 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಎಲ್ಲ ಕಡೆ ಮೇ 4 ರಂದು ಫಲಿತಾಂಶಗಳು ಪ್ರಕಟವಾಗಲಿವೆ.

ಕೇರಳದಲ್ಲಿ ತ್ರಿಕೋನ ಕದನ:

ಕೇರಳದಲ್ಲಿ , ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಅಧಿಕಾರದಲ್ಲಿರುವ ಎಲ್‌ಡಿಎಫ್ ಸತತ ಮೂರನೇ ಅವಧಿಗೆ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ. ಇದುವರೆಗೆ ರಾಜ್ಯದಲ್ಲಿ ಯಾವುದೇ ಮೈತ್ರಿಕೂಟ ಅಂತಹ ಸಾಧನೆಯನ್ನು ಸಾಧಿಸಿಲ್ಲ. 10 ವರ್ಷ ನಂತರ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಯತ್ನಿಸುತ್ತಿದೆ. ಮೊದಲ ಬಾರಿ ಬಿಜೆಪಿ ಸಂಪೂರ್ಣ ಬಲದೊಂದಿಗೆ ಅಖಾಡಕ್ಕಿಳಿದಿದೆ.

ಅಸ್ಸಾಂನಲ್ಲಿ ಕಾಂಗ್ರೆಸ್‌ ವರ್ಸಸ್‌ ಬಿಜೆಪಿ:

ಅಸ್ಸಾಂನಲ್ಲಿ ಬಿಜೆಪಿ ಸತತ 3ನೇ ಬಾರಿ ಗೆಲುವಿಗೆ ಯತ್ನಿಸುತ್ತಿದೆ. ಕಾಂಗ್ರೆಸ್‌ 10 ವರ್ಷ ನಂತರ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಕೆಲವು ಪ್ರಾದೇಶಿಕ ಪಕ್ಷಗಳೂ ಪ್ರಬಲವಾಗಿವೆ.

ಪುದುಚೇರಿಯಲ್ಲಿ ಕೂಟಗಳ ಸೆಣಸು:

30 ವಿಧಾನಸಭಾ ಕ್ಷೇತ್ರಗಳಿರುವ ಪುದುಚೇರಿಯಲ್ಲಿ 2 ಪ್ರಮುಖ ಕೂಟಗಳಾದ ಎನ್‌ಡಿಎ, ಎಸ್‌ಪಿಎ ಹಾಗೂ ಇದೀಗ ರಾಜಕೀಯ ಪ್ರವೇಶಿಸಿರುವ ಟಿವಿಕೆ ಮಧ್ಯೆ ಹಣಾಹಣಿ ನಡೆಯಲಿದೆ. 16 ಗೆಲುವಿಗೆ ಬೇಕಾದ ಮ್ಯಾಜಿಕ್‌ ನಂಬರ್‌. ಎನ್‌ಡಿಎ ಈಗ ಅಧಿಕಾರದಲ್ಲಿದ್ದು, ಪ್ರಸ್ತುತ ಮುಖ್ಯಮಂತ್ರಿ ರಂಗಸ್ವಾಮಿ ಪುನಃ ಅಧಿಕಾರದ ಆಸೆ ಕಾಣುತ್ತಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇರಾನ್‌ ಕದನ ವಿರಾಮಕ್ಕೆ ಬೇಡಿಕೊಂಡಿತು : ಹೆಗ್ಸೆತ್‌
ಗುಜರಾತಿಗಳು ಅನಕ್ಷರಸ್ಥರು ಹೇಳಿಕೆ : ಖರ್ಗೆ ವಿಷಾದ