ನವದೆಹಲಿ: ಮುಂದಿನ 25 ವರ್ಷಗಳಲ್ಲಿ ಭಾರತದಲ್ಲಿ ಬರೋಬ್ಬರಿ 44 ಕೋಟಿ ಭಾರತೀಯರು ಬೊಜ್ಜಿನ ಸಮಸ್ಯೆಗೆ ತುತ್ತಾಗಬಹುದು.ಈ ಮೂಲಕ ಚೀನಾವನ್ನು ಭಾರತ ಮೀರಿಸಲಿದೆ ಎಂದು ದಿ ಲ್ಯಾನ್ಸೆಟ್ ವರದಿಯು ತನ್ನ ಜಾಗತಿಕ ವಿಶ್ಲೇಷಣೆಯಲ್ಲಿ ಬಹಿರಂಗಪಡಿಸಿದೆ.
ವರದಿಯ ಪ್ರಕಾರ 2021ರಲ್ಲಿ ಭಾರತದಲ್ಲಿ 15-24 ವರ್ಷ ವಯಸ್ಸಿನವರು ಅತಿ ಹೆಚ್ಚು ತೂಕ ಮತ್ತು ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದರು. 1.68 ಕೋಟಿ ಯುವಕರು ಮತ್ತು 1.3 ಕೋಟಿ ಯುವತಿಯರು ಈ ಸಮಸ್ಯೆಗೆ ತುತ್ತಾಗಿದ್ದರು. 2021ರಲ್ಲಿ 18 ಕೋಟಿ ಭಾರತೀಯರು ಅಧಿಕ ಮತ್ತು ಬೊಜ್ಜಿನಿಂದ ಬಳಲುವ ಮೂಲಕ ಜಾಗತಿಕವಾಗಿ ಎರಡನೇ ಸ್ಥಾನವನ್ನು ಹೊಂದಿತ್ತು. ಚೀನಾದಲ್ಲಿ 40.2 ಕೋಟಿ ಜನರು ಸಮಸ್ಯೆಯನ್ನು ಎದುರಿಸುವ ಮೂಲಕ ಮೊದಲ ಸ್ಥಾನದಲ್ಲಿತ್ತು. ಆದರೆ 2050ರ ವೇಳೆಗೆ ಭಾರತದಲ್ಲಿ ಈ ಸಮಸ್ಯೆ ಉಲ್ಬಣಗೊಳ್ಳಲಿದ್ದು, ಈ ಪ್ರಮಾಣ ಶೇ.150ರಷ್ಟು ಹೆಚ್ಚಾಗಲಿದೆ. ಎಂದು ವರದಿ ಹೇಳಿದೆ.
ಮಾತ್ರವಲ್ಲದೇ ಜಾಗತಿಕವಾಗಿ ಬೊಜ್ಜು ಪ್ರಮಾಣ ಶೇ.121ರಷ್ಟು ಏರಿಕೆಯಾಗಲಿದ್ದು. 2050ರ ವೇಳೆಗೆ ಬೊಜ್ಜು ಹೊಂದಿರುವ ಮಕ್ಕಳು ಮತ್ತು ಹದಿಹರೆಯದವರ ಪ್ರಕಾರ 36 ಕೋಟಿಗೆ ತಲುಪುವ ನಿರೀಕ್ಷೆಯಿದೆ ಎಂದಿದೆ.ಕಡಿಮೆ ಮತ್ತು ಮಧ್ಯಮ ಆದಾಯ ದೇಶಗಳಲ್ಲಿ ಈ ಸಮಸ್ಯೆ ಹೆಚ್ಚುತ್ತಿದ್ದು, ಅಪೌಷ್ಟಿಕತೆ, ವ್ಯಾಪಕವಾದ ಸಾಂಕ್ರಾಮಿಕ ರೋಗಗಳು ಇದಕ್ಕೆ ಕಾರಣ ಎನ್ನಲಾಗಿದೆ.