ಮೊದಲು ಚಳಿಗಾಲದಲ್ಲಿ ಚುನಾವಣೆ: ಈಗ ಬಿರುಬೇಸಿಗೆಯಲ್ಲಿ!

KannadaprabhaNewsNetwork |  
Published : Mar 18, 2024, 01:45 AM IST
ಚುನಾವಣೆ | Kannada Prabha

ಸಾರಾಂಶ

ಈ ಸಲದ ಲೋಕಸಭೆ ಚುನಾವಣೆ ಬಿರುಬೇಸಿಗೆಯಲ್ಲಿ ನಡೆಯಲಿದೆ. ಈ ಚುನಾವಣೆ ಮಾತ್ರವಲ್ಲ 2004ರಿಂದ ಎಲ್ಲ ಮಹಾಚುನಾವಣೆಗಳೂ ಏಪ್ರಿಲ್‌-ಮೇ ಬೇಸಿಗೆಯಲ್ಲೇ ನಡೆದಿವೆ.

ನವದೆಹಲಿ: ಈ ಸಲದ ಲೋಕಸಭೆ ಚುನಾವಣೆ ಬಿರುಬೇಸಿಗೆಯಲ್ಲಿ ನಡೆಯಲಿದೆ. ಈ ಚುನಾವಣೆ ಮಾತ್ರವಲ್ಲ 2004ರಿಂದ ಎಲ್ಲ ಮಹಾಚುನಾವಣೆಗಳೂ ಏಪ್ರಿಲ್‌-ಮೇ ಬೇಸಿಗೆಯಲ್ಲೇ ನಡೆದಿವೆ. ಆದರೆ 1999ಕ್ಕಿಂತ ಮೊದಲು ಚಳಿಗಾಲದ ಥಂಡಿ ಹವೆಯಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಇದು ಬದಲಾಗಿದ್ದು 2004ರಲ್ಲಿ ಎಂಬುದು ವಿಶೇಷ.

ಇದಕ್ಕೆ ಕಾರಣವೂ ಇದೆ. 2004ರಲ್ಲಿ ಬಿಜೆಪಿ ಪರ ಅಲೆ ಇದೆ ಎಂದು ಭಾವಿಸಿದ್ದ ಅಟಲ್‌ ಬಿಹಾರಿ ವಾಜಪೇಯಿ, ‘ಇನ್ನು ತಡಮಾಡಬಾರದು. ಚಳಿಗಾಲದವರೆಗೂ ಕಾದರೆ ಪರಿಸ್ಥಿತಿ ಬದಲಾಗಬಹುದು’ ಎಂದು ಘೋಷಿಸಿ 6 ತಿಂಗಳು ಮೊದಲೇ ಅವಧಿಪೂರ್ವ ಚುನಾವಣೆ ಘೋಷಿಸಿದರು. ಅಂದರೆ 2004ರ ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ಚುನಾವಣೆಗಳನ್ನು ಮೇನಲ್ಲೇ ಘೋಷಿಸಿಬಿಟ್ಟರು. ಹೀಗಾಗಿ ಅಂದಿನಿಂದ ಬೇಸಿಗೆಯಲ್ಲೇ ಚುನಾವಣೆಗಳು ಆರಂಭವಾದವು. ಅಲ್ಲದೆ, ಅಂದಿನಿಂದ ಗಟ್ಟಿ ಸರ್ಕಾರಗಳು ಬಂದ ಕಾರಣ ಯಾವುದೇ ಮಧ್ಯಂತರ ಚುನಾವಣೆ ನಡೆಯದೇ ಬೇಸಿಗೆಯಲ್ಲೇ 5 ವರ್ಷಕ್ಕೊಮ್ಮೆ ಚುನಾವಣೆಗಳು ನಡೆಯುತ್ತಿವೆ.ಅತಿ ಸುದೀರ್ಘ ಚುನಾವಣೆ:1998ರಲ್ಲಿ ಲೋಕಸಭೆ ಚುನಾವಣೆಗೆ 13 ದಿನಗಳಲ್ಲಿ ಮತದಾನ ನಡೆದಿತ್ತು. 1999ರಲ್ಲಿ, ಸಾರ್ವತ್ರಿಕ ಚುನಾವಣೆಗಳು 29 ದಿನಗಳವರೆಗೆ ವಿಸ್ತರಿಸಲ್ಪಟ್ಟವು. 2004ರಲ್ಲಿ 4 ಹಂತಗಳಲ್ಲಿ 21 ದಿನಗಳಲ್ಲಿ ಲೋಕಸಭೆ ಚುನಾವಣೆ ಮುಗಿದಿತ್ತು. 2009ರಲ್ಲಿ, ಹಂತಗಳು 5ಕ್ಕೆ ಚುನಾವಣೆಯ ಅವಧಿಯು 28 ದಿನಕ್ಕೆ ವಿಸ್ತರಣೆಗೊಂಡಿತು.2014ರಲ್ಲಿ, ಲೋಕಸಭೆ ಚುನಾವಣೆಗಳನ್ನು 9 ಹಂತ ಮತ್ತು 36 ದಿನಗಳವರೆಗೆ ವಿಸ್ತರಿಸಲಾಯಿತು. 2019ರಲ್ಲಿ, 7 ಹಂತದ ಲೋಕಸಭೆ ಚುನಾವಣೆಯು 39 ದಿನಗಳ ಕಾಲ ನಡೆಯಿತು.ಈ ಸಲ ಏಪ್ರಿಲ್ 19 ಮತ್ತು ಜೂನ್ 1ರ ನಡುವೆ 7 ಹಂತಗಳಲ್ಲಿ 44 ದಿನಗಳ ಸುದೀರ್ಘ ಮತದಾನ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ ಲೋಕಸಭೆಗೆ ಚುನಾವಣೆಯು ಜೂನ್‌ವರೆಗೆ ವಿಸ್ತರಿಸಿದ್ದು ಇದೇ ಮೊದಲು. ಜೂ.4ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ