ಹೈವೋಲ್ಟೇಜ್‌ ತಂತಿ ತಗುಲಿ ಬಸ್‌ಗೆ ಬೆಂಕಿ: 5 ಮಂದಿ ಸಾವು

KannadaprabhaNewsNetwork |  
Published : Mar 12, 2024, 02:04 AM IST
ಬಸ್‌ | Kannada Prabha

ಸಾರಾಂಶ

ಬಸ್ಸಿಗೆ ಓವರ್‌ಹೆಡ್‌ ಹೈವೋಲ್ಟೇಜ್‌ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿದ್ದು, ಐದು ಮಂದಿ ಸಜೀವ ದಹನಗೊಂಡ ಘಟನೆ ಉತ್ತರಪ್ರದೇಶದ ಗಾಜಿಪುರದಲ್ಲಿ ನಡೆದಿದೆ.

ಗಾಜಿಪುರ: ಬಸ್ಸಿಗೆ ಓವರ್‌ಹೆಡ್‌ ಹೈವೋಲ್ಟೇಜ್‌ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿದ್ದು, ಐದು ಮಂದಿ ಸಜೀವ ದಹನಗೊಂಡ ಘಟನೆ ಉತ್ತರಪ್ರದೇಶದ ಗಾಜಿಪುರದಲ್ಲಿ ನಡೆದಿದೆ.

ಈ ದುರ್ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ಕುಟುಂಬವೊಂದು ಮುದುವೆ ಕಾರ್ಯಕ್ರಮಗಳನ್ನು ಮುಗಿಸಿ ದೇಗುಲಕ್ಕೆ ತೆರಳುವಾಗ ಈ ಘಟನೆ ಸಂಭವಿಸಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಜೀವಹಾನಿಗೆ ಸಂತಾಪ ಸೂಚಿಸಿ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಮೃತ ಕುಟುಂಬಕ್ಕೆ ತಲಾ 5 ಲಕ್ಷ ರು. ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರು. ಆರ್ಥಿಕ ನೆರವು ನೀಡಲಾಗುವುದು ಎಂದು ತಮ್ಮ ಟ್ವೀಟರ್‌ ಖಾತೆಯಲ್ಲಿ ಫೋಸ್ಟ್‌ ಮಾಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಸ್ಸಾಂನಲ್ಲಿ ಇನ್ನು 18 ವರ್ಷ ಮೇಲಿನವರಿಗೆ ಆಧಾರ್‌ ಇಲ್ಲ
ಪರೀಕ್ಷಾ ಅಕ್ರಮ ವಿರುದ್ಧ 17ರಿಂದ ಕೈ ದೇಶವ್ಯಾಪಿ ಆಂದೋಲನ