ಇಂದು ಕೋಲ್ಕತಾದಲ್ಲಿ ಪ್ರಧಾನಿ ನೇತೃತ್ವದಲ್ಲಿ ಯೋಗ ದಿನಾಚರಣೆ

KannadaprabhaNewsNetwork |  
Published : Jun 21, 2026, 01:45 AM IST
Yoga Day

ಸಾರಾಂಶ

12ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವಾದ್ಯಂತ ಭಾನುವಾರ ಆಚರಿಸಲಾಗುತ್ತಿದೆ. ದೇಶದ ಮುಖ್ಯ ಸಮಾರಂಭ ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ‘ಆರೋಗ್ಯಕರ ಮುಪ್ಪಿಗಾಗಿ ಯೋಗ’ ಎಂಬ ಥೀಂನ ಅಡಿಯಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇದರ ನೇತೃತ್ವ ವಹಿಸಲಿದ್ದಾರೆ.

 ನವದೆಹಲಿ: 12ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವಾದ್ಯಂತ ಭಾನುವಾರ ಆಚರಿಸಲಾಗುತ್ತಿದೆ. ದೇಶದ ಮುಖ್ಯ ಸಮಾರಂಭ ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ‘ಆರೋಗ್ಯಕರ ಮುಪ್ಪಿಗಾಗಿ ಯೋಗ’ ಎಂಬ ಥೀಂನ ಅಡಿಯಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇದರ ನೇತೃತ್ವ ವಹಿಸಲಿದ್ದಾರೆ.

38 ಸಾವಿರ ಜನ ನೋಂದಣಿ

ಈ ಕಾರ್ಯಕ್ರಮದಲ್ಲಿ ನೇರವಾಗಿ ಭಾಗಿಯಾಗಲು ಈಗಾಗಲೇ 38 ಸಾವಿರ ಜನ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಬಂಗಾಳ ಸಿಎಂ ಸುವೇಂದು ಅಧಿಕಾರಿಯವರು ತಿಳಿಸಿದ್ದಾರೆ. ಅತ್ತ ಆಯುಷ್‌ ಸಚಿವಾಲಯದ ‘ಯೋಗ ಸಂಗಮ’ ಪೋರ್ಟಲ್‌ನಲ್ಲಿ 6 ಲಕ್ಷ ಸಂಸ್ಥೆಗಳು ರೆಜಿಸ್ಟರ್‌ ಆಗಿದ್ದು, ಇವುಗಳು ದೇಶದ ವಿವಿಧ ಕಡೆಗಳಲ್ಲಿ ಏಕಕಾಲದಲ್ಲಿ ಯೋಗಾಭ್ಯಾಸವನ್ನು ಹಮ್ಮಿಕೊಳ್ಳಲಿವೆ. 

ಯೋಗವನ್ನು ಪ್ರತಿಯೊಬ್ಬರಿಗೂ ತಲುಪಿಸುವುದು ಇದರ ಗುರಿ

ಇವುಗಳಲ್ಲಿ 2 ಲಕ್ಷ ಶಾಲಾ-ಕಾಲೇಜಿಗಳು, 3.22 ಲಕ್ಷ ಸರ್ಕಾರಿ ಸಂಸ್ಥೆಗಳು, 16 ಸಾವಿರಕ್ಕೂ ಅಧಿಕ ಖಾಸಗಿ ಸಂಸ್ಥೆಗಳು, 5 ಸಾವಿರಕ್ಕೂ ಹೆಚ್ಚು ಎನ್‌ಜಿಒಗಳು, 44 ಸಾವಿರ ಸಮುದಾಯ ಗುಂಪುಗಳು ಸೇರಿದ್ದು, ಯೋಗವನ್ನು ಪ್ರತಿಯೊಬ್ಬರಿಗೂ ತಲುಪಿಸುವುದು ಇದರ ಗುರಿಯಾಗಿದೆ. ಕೋಲ್ಕತಾದ ಹೊರತಾಗಿಯೂ ಭಾರತೀಯ ದೂತಾವಾಸಗಳು ವಿದೇಶಗಳ 2,500 ಕಡೆಗಳಲ್ಲಿ ಯೋಗಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಆಯುಷ್ ಸಚಿವಾಲಯದ ರಾಜ್ಯ ಸಚಿವರಾದ ಪ್ರತಾಪ್‌ರಾವ್‌ ಯಾದವ್‌ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ವಿಶಾಖಪಟ್ಟಣಂನಲ್ಲಿ ಆಯೋಜಿಸಲಾಗಿದ್ದ ಯೋಗ ದಿನಾಚರಣೆಯಲ್ಲಿ 3.02 ಲಕ್ಷ ಮಂದಿ ನೇರವಾಗಿ ಭಾಗಿಯಾಗಿದ್ದು, ಗಿನ್ನೆಸ್‌ ವಿಶ್ವದಾಖಲೆ ಸೃಷ್ಟಿಯಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮತ್ತೆ ಟ್ರಂಪ್‌-ಮೆಲೋನಿ ಜಟಾಪಟಿ
ಮಹಾರಾಷ್ಟ್ರ : ಹನುಮಂತ ದೇಗುಲದ ಛಾವಣಿ ಕುಸಿದು 6 ಸಾವು