ಮೋದಿ ಸಂಪುಟದಲ್ಲಿ 7 ಮಾಜಿ ಸಿಎಂಗಳು!

ಸಾರಾಂಶ

ಹೊಸ ಸಚಿವ ಸಂಪುಟದಲ್ಲಿ ಮೋದಿಯೂ ಸೇರಿದಂತೆ ಒಟ್ಟು 7 ಮಾಜಿ ಮುಖ್ಯಮಂತ್ರಿಗಳಿದ್ದಾರೆ.

ದೆಹಲಿ:  ಹೊಸ ಸಚಿವ ಸಂಪುಟದಲ್ಲಿ ಮೋದಿಯೂ ಸೇರಿದಂತೆ ಒಟ್ಟು 7 ಮಾಜಿ ಮುಖ್ಯಮಂತ್ರಿಗಳಿದ್ದಾರೆ. ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್‌, ಉತ್ತರ ಪ್ರದೇಶದ ರಾಜನಾಥ್‌ಸಿಂಗ್‌, ಹರ್ಯಾಣದ ಮನೋಹರಲಾಲ್ ಖಟ್ಟರ್‌, ಅಸ್ಸಾಂನ ಸರ್ಬಾನಂದ್ ಸೋನೋವಾಲ್‌, ಕರ್ನಾಟಕದ ಎಚ್‌.ಡಿ.ಕುಮಾರಸ್ವಾಮಿ ಮತ್ತು ಬಿಹಾರದ ಜೀತನ್ ರಾಮ್ ಮಾಂಝಿ ಮಾಜಿ ಮುಖ್ಯಮಂತ್ರಿಗಳಾಗಿದ್ದಾರೆ. 

31 ಸಂಪುಟದ ದರ್ಜೆ,  41 ರಾಜ್ಯ ದರ್ಜೆ ಸ್ಥಾನ

ನರೇಂದ್ರ ಮೋದಿ ಸಂಪುಟದಲ್ಲಿ ಮೋದಿ ಅವರೂ ಸೇರಿದಂತೆ 31 ಮಂದಿ ಕ್ಯಾಬಿನೆಟ್‌ ದರ್ಜೆ ಸಚಿವರಾಗಿ ಸ್ಥಾನ ಪಡೆದಿದ್ದಾರೆ. 5 ಮಂದಿ ರಾಜ್ಯ ಖಾತೆ ಸ್ವತಂತ್ರ ಸಚಿವರಾಗಿದ್ದಾರೆ. 36 ಮಂದಿ ರಾಜ್ಯ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 28 ರಾಜ್ಯಗಳ ಪೈಕಿ 24 ರಾಜ್ಯಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಲಭಿಸಿದೆ. ದಕ್ಷಿಣ ಭಾರತಕ್ಕೆ 12 ಸಚಿವ ಸ್ಥಾನ ಲಭಿಸಿದೆ.

Share this article