ಇವಿ ಚಾರ್ಜಿಂಗ್‌ ಪಾಯಿಂಟ್‌ ಬಳಿ ಸ್ಫೋಟ : ಕುಟುಂಬದ 8 ಜನ ಬಲಿ

KannadaprabhaNewsNetwork |  
Published : Mar 19, 2026, 01:45 AM IST
EV Charging

ಸಾರಾಂಶ

ಎಲೆಕ್ಟ್ರಿಕ್‌ ಕಾರಿನ ಚಾರ್ಜಿಂಗ್‌ ಪಾಯಿಂಟ್‌ ಬಳಿ ಕಾಣಿಸಿಕೊಂಡ ಬೆಂಕಿ 3 ಮಹಡಿಯ ಕಟ್ಟಡಕ್ಕೆ ಹರಡಿ ಅದರೊಳಗಿದ್ದ 8 ಜನ ಸಾವನ್ನಪ್ಪಿ ಇನ್ನಿಬ್ಬರು ಗಾಯಗೊಂಡ ಘಟನೆ ಮಧ್ಯಪ್ರದೇಶ ಇಂದೋರ್‌ನಲ್ಲಿ ಬುಧವಾರ ಮುಂಜಾವಿನಲ್ಲಿ ಸಂಭವಿಸಿದೆ. ಘಟನೆ ಕುರಿತು ವಿಸ್ತೃತ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.

 ಇಂದೋರ್‌: ಎಲೆಕ್ಟ್ರಿಕ್‌ ಕಾರಿನ ಚಾರ್ಜಿಂಗ್‌ ಪಾಯಿಂಟ್‌ ಬಳಿ ಕಾಣಿಸಿಕೊಂಡ ಬೆಂಕಿ 3 ಮಹಡಿಯ ಕಟ್ಟಡಕ್ಕೆ ಹರಡಿ ಅದರೊಳಗಿದ್ದ 8 ಜನ ಸಾವನ್ನಪ್ಪಿ ಇನ್ನಿಬ್ಬರು ಗಾಯಗೊಂಡ ಘಟನೆ ಮಧ್ಯಪ್ರದೇಶ ಇಂದೋರ್‌ನಲ್ಲಿ ಬುಧವಾರ ಮುಂಜಾವಿನಲ್ಲಿ ಸಂಭವಿಸಿದೆ. ಘಟನೆ ಕುರಿತು ವಿಸ್ತೃತ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.

ಏನಾಯ್ತು?:

ಬುಧವಾರ ಮುಂಜಾವಿನ ವೇಳೆ ಬ್ರಜೇಶ್ವರಿ ಪ್ರದೇಶದ ಮನೆಯೊಂದರಲ್ಲಿ ಪಾಲಿಮರ್‌ ವಸ್ತುಗಳ ವ್ಯಾಪಾರಿಯಾಗಿರುವ ಮನೋಜ್‌ ಎಂಬುವವರ ಮನೆಯ ಕಾರಿನ ಇವಿ ಚಾರ್ಜಿಂಗ್‌ ಪಾಯಿಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಎಲ್ಲೆಡೆ ಹಬ್ಬಿದೆ. ಈ ವೇಳೆ ಹಬ್ಬಿದ ಬೆಂಕಿಯಿಂದ ಮನೆಯಲ್ಲಿ ಸಂಗ್ರಹಿಸಿದ್ದ ಕೆಲ ದಹನಶೀಲ ವಸ್ತುಗಳು ಮತ್ತು 10 ಎಲ್‌ಪಿಜಿ ಸಿಲಿಂಡರ್‌ಗೂ ಬೆಂಕಿ ಹತ್ತಿಕೊಂಡು ಅವು ಕೂಡಾ ಸ್ಫೋಟಿಸಿದ ಪರಿಣಾಮ ಕೆಲವೇ ಕ್ಷಣಗಳಲ್ಲಿ ಬೆಂಕಿ ಎಲ್ಲಾ ಮೂರು ಮಹಡಿಗೂ ಹಬ್ಬಿದೆ.

ಮನೆಯೊಳಗೆ ಇದ್ದವರು ಹೊರಗೆ ಬರಲು ಸಾಧ್ಯವಾಗದೇ ಬಲಿ 

ಈ ನಡುವೆ ಬೆಂಕಿಯಿಂದಾಗಿ ಮನೆಯಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಪರಿಣಾಮ ಮನೆಯ ಬಾಗಿಲುಗಳಿಗೆ ಅಳವಡಿಸಿದ್ದ ಎಲೆಕ್ಟ್ರಾನಿಕ್‌ ಲಾಕಿಂಗ್‌ ಸಿಸ್ಟಮ್‌ ಕೂಡಾ ತೆಗೆಯಲು ಬಾರದೇ ಹೋಗಿದ್ದು, ಮನೆಯೊಳಗೆ ಇದ್ದವರು ಹೊರಗೆ ಬರಲು ಸಾಧ್ಯವಾಗದೇ ಹೋಗಿರಬಹುದು ಎಂದು ಶಂಕಿಸಲಾಗಿದೆ.

ಘಟನೆ ನಡೆದ ಕೆಲ ಹೊತ್ತಿನಲ್ಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 6 ಜನರನ್ನು ಮನೆಯಿಂದ ಹೊರತಂದು ಆಸ್ಪತ್ರೆಗೆ ಕರೆದೊಯ್ದರಾದರೂ ಆ ವೇಳೆಗಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಉಳಿದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನಿಬ್ಬರು ಮಾತ್ರ ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ರಾಜಕಾರಣಕ್ಕೆ ಪೂರ್ಣ ವಿರಾಮ ಇಲ್ಲ : ಪ್ರಧಾನಿ ನರೇಂದ್ರ ಮೋದಿ
ಸರ್ವಾಧಿಕಾರಿ ಕಿಮ್‌ ಜೊಂಗ್‌ಗೆ ಎಲೆಕ್ಷನಲ್ಲಿ ಶೇ.99.93 ಮತ