ರಾಜ್ಯಸಭೆ ಸದಸ್ಯರಾಗಿ ಖರ್ಗೆ, ಮಾ.ನಾಗರಾಜ ಪ್ರಮಾಣವಚನ

KannadaprabhaNewsNetwork |  
Published : Jun 30, 2026, 02:00 AM IST
Rajyasabha

ಸಾರಾಂಶ

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಕದ ಬಿಜೆಪಿ ಮುಖಂಡ ಮಾ. ನಾಗರಾಜ, ಬಿಜೆಪಿ ನಾಯಕ ತರುಣ್‌ ಚುಗ್‌ ಸೇರಿ 8 ನೂತನ ಚುನಾಯಿತ ಸಂಸದರು ಸೋಮವಾರ ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ಸ್ವೀಕರಿಸಿದರು.

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಕದ ಬಿಜೆಪಿ ಮುಖಂಡ ಮಾ. ನಾಗರಾಜ, ಬಿಜೆಪಿ ನಾಯಕ ತರುಣ್‌ ಚುಗ್‌ ಸೇರಿ 8 ನೂತನ ಚುನಾಯಿತ ಸಂಸದರು ಸೋಮವಾರ ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ಸ್ವೀಕರಿಸಿದರು.

ನೂತನ ಸದಸ್ಯರಿಗೆ ಪ್ರಮಾಣ ವಚನ

ರಾಜ್ಯಸಭೆ ಅಧ್ಯಕ್ಷ ಸಿ.ಪಿ.ರಾಧಾಕೃಷ್ಣನ್‌ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಖರ್ಗೆ ಪ್ರತ್ಯೇಕವಾಗಿ ರಾಧಾಕೃಷ್ಣನ್ ಅವರ ಕಚೇರಿಯಲ್ಲಿ ಸಂವಿಧಾನ ಪ್ರತಿಯನ್ನು ಕೈಯಲ್ಲಿ ಹಿಡಿದು ಹಿಂದಿಯಲ್ಲಿ ಪ್ರಮಾಣ ಸ್ವೀಕರಿಸಿದರು. ಈ ವೇಳೆ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹಾಜರಿದ್ದರು.

7 ಮಂದಿ ರಾಜಸಭೆ ಸಭಾಂಗಣದಲ್ಲಿ ಶಪಥ

ಉಳಿದ 7 ಮಂದಿ ರಾಜಸಭೆ ಸಭಾಂಗಣದಲ್ಲಿ ಶಪಥಗೈದರು. ಅವವರಲ್ಲಿ ತರುಣ್‌ ಚುಗ್‌, ಜಿತೇಂದ್ರ ಮೇಘಜಿಭಾಯ್ ಕಂಜಾರಿಯಾ, ಮಾನ್ಸಿಂಗ್ ಪರ್ಮಾರ್ (ಗುಜರಾತ್), ಮಾ. ನಾಗರಾಜ (ಕರ್ನಾಟಕ), ರಾಜೇಂದ್ರ ಹೀರಾಲಾಲ್ ಜೈನ್ (ಮಹಾರಾಷ್ಟ್ರ), ಅಧಿಕಾರಿ ಮಯೂಮ್ ಶಾರದಾ ದೇವಿ (ಮಣಿಪುರ) ಮತ್ತು ಅಲ್ಕಾ ಸಿಂಗ್ (ರಾಜಸ್ಥಾನ) ಇದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹೋಮ್ ಸ್ಟೇನಲ್ಲಿ ಯುವತಿ ಅನುಮಾನಾಸ್ಪದ ಸಾವು
₹12000 ಸಂಬಳವಿದ್ರೂ ₹25 ಲಕ್ಷದ ಮನೆ ಕಟ್ಟಿಸುತ್ತಿದ್ದ ಆರೋಪಿ!