ಬಿಸಿಗಾಳಿಗೆ ನದಿಗಳೇ ಬಿಸಿ, ಫ್ರಾನ್ಸ್‌ನಲ್ಲಿ 1000 ಸಾವು ! - ಉಷ್ಣಮಾರುತಕ್ಕೆ ತತ್ತರಿಸಿದ ಯುರೋಪ್‌

KannadaprabhaNewsNetwork |  
Published : Jun 29, 2026, 04:15 AM ISTUpdated : Jun 29, 2026, 07:37 AM IST
Summer

ಸಾರಾಂಶ

ಐರೋಪ್ಯ ದೇಶಗಳ ಪಾಲಿಗೆ ಈ ವರ್ಷದ ಬೇಸಿಗೆಯು ಘೋರವಾಗಿದ್ದು, ಸುಮಾರು 40ರಿಂದ 44 ಡಿಗ್ರಿವರೆಗಿನ ಬಿಸಿಲಿಗೆ ಜನ ಬಸವಳಿದು ಹೋಗಿದ್ದಾರೆ. ಜೂ.21ರ ನಂತರ ಫ್ರಾನ್ಸ್ ಒಂದರಲ್ಲೇ ಈವರೆಗೆ 1 ಸಾವಿರಕ್ಕೂ ಹೆಚ್ಚು ಮಂದಿ ಸೇರಿ, ಯುರೋಪ್‌ನಾದ್ಯಂತ 1300 ಜನ ಬಿಸಿಲಿನಿಂದಾಗಿ ಸಾವನ್ನಪ್ಪಿದ್ದಾರೆ

ಪ್ಯಾರಿಸ್‌: ಐರೋಪ್ಯ ದೇಶಗಳ ಪಾಲಿಗೆ ಈ ವರ್ಷದ ಬೇಸಿಗೆಯು ಘೋರವಾಗಿದ್ದು, ಸುಮಾರು 40ರಿಂದ 44 ಡಿಗ್ರಿವರೆಗಿನ ಬಿಸಿಲಿಗೆ ಜನ ಬಸವಳಿದು ಹೋಗಿದ್ದಾರೆ. ಜೂ.21ರ ನಂತರ ಫ್ರಾನ್ಸ್ ಒಂದರಲ್ಲೇ ಈವರೆಗೆ 1 ಸಾವಿರಕ್ಕೂ ಹೆಚ್ಚು ಮಂದಿ ಸೇರಿ, ಯುರೋಪ್‌ನಾದ್ಯಂತ 1300 ಜನ ಬಿಸಿಲಿನಿಂದಾಗಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಬಹುತೇಕರು 65 ವರ್ಷ ಮೇಲ್ಪಟ್ಟವರು. ಇದು ವಾಡಿಕೆಯ ಸಾವಿಗಿಂತ ಬಹು ಅಧಿಕವಾಗಿದೆ.

ಅತ್ತ ಸ್ಕ್ಯಾಂಡಿನೇವಿಯಾ ಮತ್ತು ಆಲ್ಪ್ಸ್ ಪ್ರದೇಶದಲ್ಲಿ ತಾಪಮಾನ 40 ಡಿ.ಸೆ.ಗಿಂತಲೂ ಮೇಲೇರಿದೆ. ಸ್ವಿಸ್ ಹಿಮನದಿಗಳು ವೇಗವಾಗಿ ಕರಗಲು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಸಮುದ್ರ ಮಟ್ಟ ಹೆಚ್ಚಳ, ಹಠಾತ್‌ ಪ್ರವಾಹಗಳು ಸಂಭವಿಸುವ ಆತಂಕ ಮನೆಮಾಡಿದೆ. ಅತ್ತ 40 ಡಿಗ್ರಿಯಷ್ಟು ತಾಪ ಅನುಭವಿಸಿದ ಡೆನ್ಮಾರ್ಕ್‌ ಪಾಲಿಗೆ ಶನಿವಾರವು ಅತಿಹೆಚ್ಚು ಬಿಸಿ ದಿನವಾಗಿತ್ತು.

ಜಲಫಿರಂಗಿ ಬಳಕೆ:

ಸಾಮಾನ್ಯವಾಗಿ ಗುಂಪುಗೂಡಿರುವ ಜನರನ್ನು ಚದುರಿಸಲು ಬಳಸಲಾಗುವ ಜಲಫಿರಂಗಿಗಳನ್ನು (ವಾಟರ್‌ ಕೆನಾನ್) ಜರ್ಮನಿ ಪೊಲೀಸರು ಬೇಸಿಗೆಯ ವಿರುದ್ಧ ಸೆಣೆಸಲು ಬಳಕೆ ಮಾಡುವ ಸ್ಥಿತಿ ಬಂದೊದಗಿದೆ. ಬಿಸಿಲಿನಿಂತ ತತ್ತರಿಸಿರುವ ಬರ್ಲಿನ್‌ ನಗರಕ್ಕೆ ತಂಪೆರೆಯಲು ಜಲಫಿರಂಗಿಗಳ ಮೂಲಕ ನೀರನ್ನು ಚಿಮ್ಮಿಸಲಾಗುತ್ತಿದೆ.

ಅತ್ತ ಪ್ಯಾರಿಸ್‌ನಲ್ಲಿ ಫ್ಯಾನ್‌ಗಳ ಬೇಡಿಕೆಯಲ್ಲಿ ಭಾರೀ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆಸ್ಪತ್ರೆಗಳಿಗೆ ಬರುತ್ತಿರುವ ತುರ್ತು ಕರೆಗಳ ಪ್ರಮಾಣದಲ್ಲಿ ಶೇ.80ರಷ್ಟು ಏರಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಟಲಿಯ 18 ನಗರಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಅಣು ಸ್ಥಾವರ ಸ್ಥಗಿತ:

ಅಣು ವಿದ್ಯುತ್‌ ಸ್ಥಾವರಗಳ ರಿಯಾಕ್ಟರ್‌ಗಳನ್ನು ತಣ್ಣಗಾಗಿಸಲು ನೀರನ್ನು ಬಳಸಲಾಗುತ್ತದೆ. ಆದರೆ ಇದೀಗ ಸ್ವಿಜರ್ಲೆಂಡ್‌ನ ಆರೆ ನದಿಯ ನೀರೇ ಬಿಸಿಯಾಗಿರುವ ಕಾರಣ, ಯುರೋಪಿನ ಅತ್ಯಂತ ಹಳೆಯ ಅಣು ವಿದ್ಯುತ್‌ ಸ್ಥಾವರದಲ್ಲಿ ಶುಕ್ರವಾರದಿಂದ ಕೆಲಸವನ್ನೇ ನಿಲ್ಲಿಸಲಾಗಿದೆ.

ಕಳೆದ ಎರಡು ವಾರಗಳಿಂದ ಯುರೋಪ್‌ ದೇಶಗಳಲ್ಲಿ ಭಾರೀ ಬಿಸಿ ಗಾಳಿ

20ರಿಂದ 25 ಡಿ.ಸೆ.ನಷ್ಟು ಇರುತ್ತಿದ್ದ ತಾಪಮಾನ ದಿಢೀರ್‌ 44 ಡಿ.ಸೆಗೇರಿಕೆ

ಇದು ಇತಿಹಾಸಲ್ಲೇ ಕಂಡುಕೇಳರಿಯದ ಉಷ್ಣಾಂಶವಾದ ಕಾರಣ ವಿಪತ್ತು

ಇದರಿಂದ ಹಲವು ದೇಶಗಳಲ್ಲಿ ಸಾಮಾನ್ಯ ಜನಜೀವನದಲ್ಲಿ ಭಾರೀ ವ್ಯತ್ಯಯ

ಫ್ರಾನ್ಸ್‌ ಸೇರಿ ಕೆಲ ದೇಶಗಳಲ್ಲಿ ವಾರದಲ್ಲಿ 1200ಕ್ಕೂ ಹೆಚ್ಚು ಅಧಿಕ ಸಾವು

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜಿರಳೆ ಹೋರಾಟದಿಂದ ರಾಜಸ್ಥಾನ ಹಳ್ಳಿಗೆ ಸಿಕ್ಕಿತು ಹೊಸ ಶಾಲೆ ಕಟ್ಟಡ!
ಮಂಗಳೂರಿಗಾಗಿ ಕೇರಳಂ ಸಂಸದರ ಓಣಂ ನಿರಶನ!