3 ವರ್ಷ ಮದುವೆಯಿಂದ ಪಾರಾಗಲು ಕೇತನ್‌ ಕೊಂದ ಸಿಯಾ

KannadaprabhaNewsNetwork |  
Published : Jun 29, 2026, 04:15 AM ISTUpdated : Jun 29, 2026, 07:42 AM IST
Sia

ಸಾರಾಂಶ

ಸಿಯಾಳ ಪ್ರಿಯಕರ ಚೇತನ್ 3 ವರ್ಷ ಬಿಟ್ಟು ಮದುವೆಯಾಗುತ್ತೇನೆ ಎಂದಿದ್ದ. ಹಾಗಾಗಿ ಕೇತನ್‌ ಸಾವನ್ನಪ್ಪಿದರೆ ಸೂತಕದ ಛಾಯೆಯಲ್ಲಿ ಮನೆಯಲ್ಲೂ ಸದ್ಯಕ್ಕೆ ಮದುವೆ ಮಾತನಾಡಲ್ಲ. ಆಗ 3 ವರ್ಷ ತನಗಿಷ್ಟದ ಬದುಕು ಬದುಕಬಹುದು ಎಂಬುದು ಸಿಯಾ ಪ್ಲಾನ್‌ ಆಗಿತ್ತು ಎನ್ನುವುದು ತನಿಖೆಯಲ್ಲಿ ಬಯಲಾಗಿದೆ.

 ಪುಣೆ: ದೇಶವನ್ನೇ ಬೆಚ್ಚಿ ಬೀಳಿಸಿದ ಕೇತನ್‌ ಅಗರ್ವಾಲ್ ಹತ್ಯೆ ಪ್ರಕರಣ ಕುರಿತ ಹೊಸ ಸಂಗತಿಗಳು ದಿನಕ್ಕೊಂದರಂತೆ ಬಯಲಾಗುತ್ತಿವೆ. ಕೇತನ್‌ನನ್ನು ಭಾವಿ ಪತ್ನಿ ಸಿಯಾ ಏಕೆ ಕೊಂದಳು ಎಂಬ ಹೊಸ ವಿಷಯ ಭಾನುವಾರ ಬೆಳಕಿಗೆ ಬಂದಿದೆ. ಸಿಯಾಳ ಪ್ರಿಯಕರ ಚೇತನ್ 3 ವರ್ಷ ಬಿಟ್ಟು ಮದುವೆಯಾಗುತ್ತೇನೆ ಎಂದಿದ್ದ. ಹಾಗಾಗಿ ಕೇತನ್‌ ಸಾವನ್ನಪ್ಪಿದರೆ ಸೂತಕದ ಛಾಯೆಯಲ್ಲಿ ಮನೆಯಲ್ಲೂ ಸದ್ಯಕ್ಕೆ ಮದುವೆ ಮಾತನಾಡಲ್ಲ. ಆಗ 3 ವರ್ಷ ತನಗಿಷ್ಟದ ಬದುಕು ಬದುಕಬಹುದು ಎಂಬುದು ಸಿಯಾ ಪ್ಲಾನ್‌ ಆಗಿತ್ತು ಎನ್ನುವುದು ತನಿಖೆಯಲ್ಲಿ ಬಯಲಾಗಿದೆ.

ಸಿಯಾ ಪ್ರೇಮಿ ಚೇತನ್‌ ಚೌಧರಿ 3 ವರ್ಷಗಳ ಸಮಯ ಕೇಳಿದ್ದ

‘ಸಿಯಾ ಪ್ರೇಮಿ ಚೇತನ್‌ ಚೌಧರಿ, ಆಕೆಯನ್ನು ಮದುವೆಯಾಗುವುದಕ್ಕೆ ಕನಿಷ್ಠ 3 ವರ್ಷಗಳ ಸಮಯ ಕೇಳಿದ್ದ. ಅಲ್ಲಿಯ ತನಕ ವೃತ್ತಿ ಜೀವನದ ಗಮನ ಹರಿಸುವುದಾಗಿ ಹೇಳಿದ್ದ. ಆದರೆ ಸಿಯಾ ಮದುವೆ ಕೇತನ್‌ ಜತೆ ಇದೇ ನವೆಂಬರ್‌ನಲ್ಲಿ ನಿಗದಿಯಾಗಿತ್ತು. ಹೀಗಾಗಿ 3 ವರ್ಷ ಮದುವೆ ಮುಂದೂಡುವುದಕ್ಕಾಗಿ ಕೇತನ್‌ನ್ನು ಕೋಟೆಯಿಂದ ತಳ್ಳಿದಳು. ಕೇತನ್‌ ಕತೆ ಮುಗಿದರೆ ಮನೆಯಲ್ಲಿಯೂ ಸದ್ಯಕ್ಕೆ ಶೋಕ, ಸೂತಕ ಎನ್ನುವ ಕಾರಣಕ್ಕೆ ಮದುವೆ ಬಗ್ಗೆ ಮಾತನಾಡುವುದಿಲ್ಲ. ಆಗ ಚೇತನ್‌ ಕೆಲಸದ ಬಗ್ಗೆ ಗಮನ ಹರಿಸಬಹುದು. ತಾನೂ ಕೂಡ 3 ವರ್ಷ ಸ್ವತಂತ್ರ ಬದುಕು ಬದುಕಬಹುದು ಎನ್ನುವುದು ಸಿಯಾ ಲೆಕ್ಕಾಚಾರವಾಗಿತ್ತು’ ಎಂದು ತನಿಖೆಯಿಂದ ತಿಳಿದು ಬಂದಿದೆ.

ಕೊಲೆಗೆ ಗೂಗಲ್‌ ಸರ್ಚ್, ರಿಹರ್ಸಲ್‌!

ಪುಣೆ: ಫೆಬ್ರವರಿಯಲ್ಲಿ ನಿಶ್ಚಿತಾರ್ಥವಾದ ದಿನದಿಂದಲೂ ಕೇತನ್‌ ಅಗರ್ವಾಲ್‌ನನ್ನು ಮುಗಿಸಲು ಸಿಯಾ ಗೋಯಲ್‌ ಹಾಗೂ ಪ್ರಿಯಕರ ಚೇತನ್‌ ಸಂಚು ರೂಪಿಸುತ್ತಿದ್ದರು. ಹೇಗೆ ಕೊಲೆ ಮಾಡಬಹುದು ಎನ್ನುವುದಕ್ಕೆ ಗೂಗಲ್‌ನಲ್ಲಿ ಸರ್ಚ್‌ ಕೂಡ ಮಾಡಿದ್ದರು. ಅಲ್ಲದೇ ಮೊದಲೇ ಒಮ್ಮೆ ಕೋಟೆಗೆ ಹೋಗಿ ಜಾಗಗಳನ್ನು ನೋಡಿಕೊಂಡು ಬಂದು ಕೊಲೆಯ ರಿಹರ್ಸಲ್‌ ಮಾಡಿದ್ದರು. ಪೊಲೀಸರ ಕೈಗೆ ಸಿಕ್ಕಿಬೀಳದಿರಲು ಹೇಗೆ ವೇಷ ಮರೆಸಿಕೊಳ್ಳಬೇಕು ಹಾಗೂ ಸಿಕ್ಕಿ ಬಿದ್ದಿದ್ದರೆ ಹೇಗೆ ಉತ್ತರಿಸಬೇಕು ಅಂತ ಮೊದಲೇ ಚರ್ಚಿಸಿದ್ದರು. ಅಲ್ಲದೇ ಮೊಬೈಲ್‌ ಚಾಟ್‌ಗಳನ್ನೂ ಕೂಡ ಸಂಪೂರ್ಣವಾಗಿ ಅಳಿಸಿ ಹಾಕಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜಿರಳೆ ಹೋರಾಟದಿಂದ ರಾಜಸ್ಥಾನ ಹಳ್ಳಿಗೆ ಸಿಕ್ಕಿತು ಹೊಸ ಶಾಲೆ ಕಟ್ಟಡ!
ಮಂಗಳೂರಿಗಾಗಿ ಕೇರಳಂ ಸಂಸದರ ಓಣಂ ನಿರಶನ!