ಈ ವರ್ಷ ನನ್ನ ದೇಶಕ್ಕೆ ಹಿಂದಿರುಗುತ್ತೇನೆ : ಹಸೀನಾ

KannadaprabhaNewsNetwork |  
Published : Jun 29, 2026, 04:15 AM IST
Haseena

ಸಾರಾಂಶ

ಎರಡು ವರ್ಷದ ಹಿಂದೆ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಬಳಿಕ ದೇಶಬಿಟ್ಟು ಭಾರತಕ್ಕೆ ಬಂದು ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ , ಈ ವರ್ಷವೇ ಸ್ವ ದೇಶಕ್ಕೆ ಹಿಂದಿರುಗುತ್ತೇನೆ’ ಎಂದಿದ್ದಾರೆ.

ನವದೆಹಲಿ: ಎರಡು ವರ್ಷದ ಹಿಂದೆ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಬಳಿಕ ದೇಶಬಿಟ್ಟು ಭಾರತಕ್ಕೆ ಬಂದು ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ , ಈ ವರ್ಷವೇ ಸ್ವ ದೇಶಕ್ಕೆ ಹಿಂದಿರುಗುತ್ತೇನೆ’ ಎಂದಿದ್ದಾರೆ. 

ಮರಣದಂಡನೆ ನೀಡಿರುವುದು ನ್ಯಾಯವಲ್ಲ

ಎನ್‌ಡಿಟೀವಿ ಸಂದರ್ಶನ ನೀಡಿದ ಅವರು, ‘ಬಾಂಗ್ಲಾದೇಶದಲ್ಲಿ ನನ್ನ ವಿರುದ್ಧದ ಆರೋಪಗಳಿಗೆ ಮರಣದಂಡನೆ ನೀಡಿರುವುದು ನ್ಯಾಯವಲ್ಲ. ಇದು ಅನ್ಯಾಯದ ಮತ್ತೊಂದು ಭಾಗ. ಅಸಾಂವಿಧಾನಿಕ ಮತ್ತು ರಾಜಕೀಯ ಪ್ರೇರಿತ ನಡೆ. ಅವಾಮಿ ಲೀಗ್‌ ಅನ್ನು ನಾಯಕರಿಲ್ಲದಂತೆ ಮಾಡಲು ನ್ಯಾಯಾಂಗವನ್ನು ಬಳಸಿಕೊಳ್ಳಲಾಗುತ್ತಿದೆ.  ಅಂತಹ ಪ್ರಯತ್ನಗಳು ಮೊದಲು ನಡೆದಿದ್ದವು. ವಿಫಲವಾಗಿದ್ದವು. ಈಗಲೂ ಆಗುತ್ತದೆ’ ಎಂದರು. 

ನನಗೆ ಸಾವಿನ ಭಯವಿಲ್ಲ

‘ನನಗೆ ಸಾವಿನ ಭಯವಿಲ್ಲ. 1975ರಲ್ಲಿ ಇಡೀ ಕುಟುಂಬವನ್ನು ಕಳೆದುಕೊಂಡೆ. 2024 ಆ.21ರಂದು ನನ್ನನ್ನೂ ಗ್ರೆನೇಡ್‌ನಿಂದ ಕೊಲ್ಲಲು ಯತ್ನಿಸಿದರು, ನನ್ನ ವಿರುದ್ಧ ಅನೇಕ ಪಿತೂರಿಗಳು ನಡೆದವು. ಆದರೆ ಪ್ರತಿಯೊಂದು ಜಾಲವನ್ನು ಬೇಧಿಸಿ ನಾನು ಬಾಂಗ್ಲಾ ಜನರ ಪರ ನಿಂತೆ. 5 ಸಲ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡಿದೆ. ಹೀಗಾಗಿ ಎಲ್ಲಾ ಅಡೆತಡೆ ದಾಟಿ, ಪಿತೂರಿಗಳನ್ನು ನಾಶಪಡಿಸಿ ಈ ವರ್ಷ ನನ್ನ ದೇಶಕ್ಕೆ ಹಿಂತಿರುಗುತ್ತೇನೆ’ ಎಂದು ಹೇಳಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜಿರಳೆ ಹೋರಾಟದಿಂದ ರಾಜಸ್ಥಾನ ಹಳ್ಳಿಗೆ ಸಿಕ್ಕಿತು ಹೊಸ ಶಾಲೆ ಕಟ್ಟಡ!
ಮಂಗಳೂರಿಗಾಗಿ ಕೇರಳಂ ಸಂಸದರ ಓಣಂ ನಿರಶನ!